ದ್ವಿತೀಯ ಪಿಯುಸಿ, ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ-1 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 02. ಏಪ್ರಿಲ್ 2- ವಿಜ್ಞಾನ ಪ್ರಸಕ್ತ ಸಾಲಿನ (2024-25) ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ‌. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟ ಮಾಡಿದೆ. ಮಾರ್ಚ್ 1 ರಿಂದ 19ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದರೆ, ಮಾರ್ಚ್ 20 ರಿಂದ ಏಪ್ರಿಲ್ 2ರ ವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಬಹುತೇಕ ತಾತ್ಕಾಲಿಕ ವೇಳಾಪಟ್ಟಿಯೇ ಅಂತಿಮವಾಗಲಿದೆ.

ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿಲಾಗಿದ್ದು, ಡಿ.16ರ ಒಳಗೆ ಆಕ್ಷೇಪಣೆಯಲ್ಲಿ ಬೋರ್ಡ್ ಸಲ್ಲಿಕೆ ಮಾಡಬಹುದಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ….

ದ್ವಿತೀಯ ಪಿಯುಸಿ ಪರೀಕ್ಷೆ- ವೇಳಾಪಟ್ಟಿ

  • ಮಾರ್ಚ್ 1- ಕನ್ನಡ, ಅರೇಬಿಕ್.
  • ಮಾರ್ಚ್ 3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
  • ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ,ಮರಾಠಿ, ಉರ್ದು,ಸಂಸ್ಕೃತ,ಫ್ರೆಂಚ್.
  • ಮಾರ್ಚ್ 5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
  • ಮಾರ್ಚ್ 7- ಇತಿಹಾಸ, ಭೌತಶಾಸ್ತ್ರ
  • ಮಾರ್ಚ್‌ 8- ಹಿಂದಿ.
  • ಮಾರ್ಚ್ 10- ಐಚಿಕ ಕನ್ನಡ, ಲೆಕ್ಕಶಾಸ್ತ್ರ,ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ.
  • ಮಾರ್ಚ್ 12- ಮನಃಶಾಸ್ತ್ರ, ರಸಾಯನಶಾಸ್ತ್ರ,ಮೂಲ ಗಣಿತ.
  • ಮಾರ್ಚ್ 13- ಅರ್ಥಶಾಸ್ತ್ರ
  • ಮಾರ್ಚ್ 15- ಇಂಗ್ಲೀಷ್
  • ಮಾರ್ಚ್ 17- ಭೂಗೋಳಶಾಸ್ತ್ರ, ಜೀವಶಾಸ್ತ್ರ
  • ಮಾರ್ಚ್ 18- ಸಮಾಜಶಾಸ್ತ್ರ,ವಿದ್ಯುನ್ಮಾನಶಾಸ್ತ್ರ,ಗಣಕ ವಿಜ್ಞಾನ
  • ಮಾರ್ಚ್ 19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್,ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್.
Also Read  ರಾಜ್ಯಮಟ್ಟಕ್ಕೆ ಆಯ್ಕೆಯಾದ ಅದ್ಬುತಕುಮಾರಿ

SSLC ಪರೀಕ್ಷೆ –1 ವೇಳಾಪಟ್ಟಿ

  • ಮಾರ್ಚ್ 20- ಪ್ರಥಮ ಭಾಷೆ ವಿಷಯಗಳು
  • ಮಾರ್ಚ್ 22- ಸಮಾಜ ವಿಜ್ಞಾನ
  • ಮಾರ್ಚ್ 24- ದ್ವಿತೀಯ ಭಾಷೆ ವಿಷಯಗಳು
  • ಮಾರ್ಚ್ 27- ಗಣಿತ
  • ಮಾರ್ಚ್ 29- ತೃತೀಯ ಭಾಷೆ ವಿಷಯಗಳು

 

 

error: Content is protected !!
Scroll to Top