ನಟನೆಗೆ ಗುಡ್‌ಬೈ ಹೇಳಿದ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 02. ಹಲವು ಸಿನಿಮಾಗಳಲ್ಲಿ ನಟಿಸಿ ಅದ್ಭುತ ನಟ ಎಂದೆನಿಸಿಕೊಂಡಿರುವ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಅವರು ನಟನೆಗೆ ಗುಡ್‌ಬೈ ಹೇಳಿದ್ದು, ಅವರ ಈ ನಿರ್ಧಾರಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಳೆದ ಕೆಲ ವರ್ಷಗಳು ಉತ್ತಮವಾಗಿತ್ತು. ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದೆ ಬಂದಂತೆಲ್ಲ ಮಗನಾಗಿ, ಗಂಡನಾಗಿ, ತಂದೆಯಾಗಿ ಮನೆಗೆ ಹಿಂತಿರುಗಲು ಇದು ಸರಿಯಾದ ಸಮಯ ಎಂದು ನಾನು ಅರಿತುಕೊಂಡೆ’ ಎಂದು ಬರೆದುಕೊಂಡಿದ್ದಾರೆ. 2013 ರಲ್ಲಿ ‘ಲೂಟೆರಾ’ ಸಿನಿಮಾ ಮೂಲಕ ವಿಕ್ರಾಂತ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 2023ರಲ್ಲಿ ಬಿಡುಗಡೆಯಾದ ’12th ಫೇಲ್’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ‘ಮಿರ್ಜಾಪುರ್’ ಸರಣಿಯಲ್ಲಿ ಅವರು ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಇನ್ನು ಈ ವರ್ಷ ‘ದಿ ಸಾಬ್ರಮತಿ ರಿಪೋರ್ಟ್’ ಚಿತ್ರದಲ್ಲಿ ನಟಿಸಿದ್ದು, ಇದಕ್ಕಾಗಿ ಅವರು ಬೆದರಿಕೆ ಕೂಡ ಎದುರಿಸಿದ್ದರು ಎನ್ನಲಾಗಿದೆ.

Also Read  ಅಂದುಕೊಂಡ ಕೆಲಸ ಕಾರ್ಯಗಳು ಬೇಗನೆ ಆಗಬೇಕೆಂದರೆ ತಪ್ಪದೇ ಈ ನಿಯಮ ಪಾಲಿಸಿ

 

error: Content is protected !!
Scroll to Top