ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‌ನಲ್ಲಿ ಸ್ಕೈ ಡೈನಿಂಗ್ ಆರಂಭ

(ನ್ಯೂಸ್ ಕಡಬ) newskadaba.com . 30. ವಿಶ್ವ ಪ್ರಸಿದ್ಧ ತ್ರಾಸಿ – ಮರವಂತೆ ಬೀಚ್‌ನಲ್ಲಿ ವಿನೂತನವಾದ ಸ್ಕೈ ಡೈನಿಂಗ್ ನವೆಂಬರ್ 29ರಿಂದ ಆರಂಭಗೊಂಡಿದೆ.

ಮಂಗಳೂರಿನ ಪಣಂಬೂರು ಬಳಿಕ ಇದು ರಾಜ್ಯದ ಎರಡನೇ ಸ್ಕೈ ಡೈನಿಂಗ್ ತಾಣವಾಗಿದೆ. ಇದನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಗುರುರಾಜ ಗಂಟಿಹೊಳೆ ಅವರು, ಈ ಹೊಟೇಲ್ ಆರಂಭದಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಇದರಲ್ಲಿ 90-100 ಮೀಟರ್ ಎತ್ತರದಲ್ಲಿ ಕುಳಿತು ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರವನ್ನು ನೋಡುತ್ತಾ ತಿನಿಸನ್ನು ಸವಿಯಬಹುದು. ಉದ್ಘಾಟನಾ ಸಮಾರಂಭದಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಪಿ., ತ್ರಾಸಿ ಗ್ರಾ.ಪಂ. ಅಧ್ಯಕ್ಷ ಮಿಥುನ್ ದೇವಾಡಿಗ, ಟೀಮ್ ಮಂತ್ರಾಸ್ ಸ್ಕೈಡೈನಿಂಗ್ ಮಾಲಕ ಪ್ರವೇಶ್ ಮಂಜೇಶ್ವರ, ಪ್ರಮುಖರಾದ ರಾಕೇಶ್ ಅಥಾವರ್, ನಾರಾಯಣ ಕುಲಾಲ್, ರವಿರಾಜ್, ಗ್ರಾ.ಪಂ. ಸದಸ್ಯ ನಾಗರಾಜ ಪಟಗಾರ್ ಮತ್ತಿತರರು ಭಾಗವಹಿಸಿದ್ದರು.

Also Read  ದ .ಕ ಜಿ. ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ➤ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

 

 

error: Content is protected !!
Scroll to Top