ಫಿಕ್ಸಿಂಗ್‌ ಪ್ರಕರಣ: ದಕ್ಷಿಣ ಆಫ್ರಿಕಾದ 3 ಕ್ರಿಕೆಟಿಗರ ಬಂಧನ

(ನ್ಯೂಸ್ ಕಡಬ) newskadaba.com . 30. ಫಿಕ್ಸಿಂಗ್‌ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಕ್ರಿಕೆಟಿಗರನ್ನು ಬಂಧಿಸಲಾಗಿದೆ. ಈ ಹಿಂದೆ ವಿಶ್ವದ ಅಗ್ರ ಕ್ರಮಾಂಕದ ಏಕದಿನ ಬೌಲರ್‌ ಆಗಿದ್ದ, ಮಾಜಿ ವೇಗದ ಬೌಲರ್ ಲೊನ್ವಾಬೊ ತ್ಸೊಟ್ಸೊಬೆ, ವಿಕೆಟ್‌ಕೀಪರ್-ಬ್ಯಾಟರ್ ಥಾಮಿ ತ್ಸೊಲೆಕಿಲ್ ಮತ್ತು ಮಧ್ಯಮ ವೇಗಿ ಎಥಿ ಎಂಬಾಲಾಟಿ ಬಂಧಿತ ಕ್ರಿಕೆಟಿಗರು. 2004 ರ ಭ್ರಷ್ಟಾಚಾರ ಚಟುವಟಿಕೆಗಳ ತಡೆ ಮತ್ತು ಹೋರಾಟದ ಸೆಕ್ಷನ್ 15 ರ ಅಡಿಯಲ್ಲಿ ಮೂವರ ವಿರುದ್ಧ ಆರೋಪ ಹೊರಿಸಲಾಗಿದೆ.

2015-16 ರಲ್ಲಿ ನಡೆದಿದ್ದ ದೇಶೀಯ ಟಿ20 ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಮಾಡುವ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರ ಮೇಲೆ ನಿಷೇಧವನ್ನು ಹೇರಿತ್ತು. ತ್ಸೊಟ್ಸೊಬೆ ಅವರು ಎಲ್ಲಾ ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದವರು. ಜೂನ್ 2010 ರಲ್ಲಿ ಟ್ರಿನಿಡಾಡ್‌ ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಪದಾರ್ಪಣೆ ಮಾಡಿದ್ದು, ಒಟ್ಟು ಅವರು ಐದು ಟೆಸ್ಟ್‌ ಗಳನ್ನು ಆಡಿದರು.

Also Read  ಗಾಂಜಾ ಸೇವನೆಯಿಂದ ದುಷ್ಕರ್ಮಿಗಳ ದಾಳಿ         ಇಬ್ಬರ ಸ್ಥಿತಿ ಗಂಭೀರ..! ಇಬ್ಬರು ಅರೆಸ್ಟ್..!

 

 

error: Content is protected !!
Scroll to Top