ಜಾನುವಾರುಗಳಿಗೆ ಮೇವು ತರಲೆಂದು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಮಣಿಪಾಲ, . 30. ಜಾನುವಾರುಗಳಿಗೆ ಮೇವು ತರಲೆಂದು ಮನೆಯ ಪಕ್ಕದ ಗುಡ್ಡಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ನ.29ರಂದು ಪತ್ತೆಯಾಗಿದೆ.

ಮೃತ ದುರ್ದೈವಿಯನ್ನು ಸರಳೇಬೆಟ್ಟು ವಾರ್ಡ್ನ ನೆಹರೂ ನಗರದ ನಿವಾಸಿ ಪುಷ್ಪಾ ನಾಯ್ಕ್ (66) ಎಂದು ಗುರುತಿಸಲಾಗಿದೆ. ಪುಷ್ಪಾ ಅವರು ದನಕರುಗಳಿಗೆ ಹುಲ್ಲು ತರಲೆಂದು ಮನೆಯ ಪಕ್ಕದ ಗುಡ್ಡದ ಕಡೆಗೆ ನ. 28ರಂದು ಸುಮಾರು ಸಂಜೆ ೬ ಗಂಟೆ ವೇಳೆಗೆ ತೆರಳಿದವರು, ಬಳಿಕ ವಾಪಸ್ ಮನೆಗೆ ಹಿಂದಿರುಗಿರಲಿಲ್ಲ. ಆತಂಕಗೊಂಡ ಮನೆಯವರು ಅವರಿಗಾಗಿ ಹುಡುಕಾಟ ನಡೆಸಿದ್ದು, ರಾತ್ರಿಯಾದರೂ ಪುಷ್ಪಾ ಅವರ ಬಗ್ಗೆ ಸುಳಿವು ಸಿಗಲಿಲ್ಲ. ಮರುದಿನ ಮುಂಜಾನೆ ಪುಷ್ಪ ಅವರ ಮೃತದೇಹ ಮನೆಯಿಂದ 200 ಮೀ. ದೂರದ ಗುಡ್ಡೆಯಲ್ಲಿ ಪತ್ತೆಯಾಗಿದೆ. ಪತ್ತೆಯಾದ ಪುಷ್ಪ ಅವರ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಸಾಮಾನ್ಯ ಗಾಯಗಳಾಗಿರುವುದು ಕಂಡು ಬಂದಿದೆ. ಕೈ ಮೇಲೆ ಗಾಯ ಗಳಾಗಿದ್ದವು. ಅವರ ಕುತ್ತಿಗೆ ಭಾಗವನ್ನು ಇರುವೆ ಮುತ್ತಿಂಡಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

Also Read  ಉಗ್ರ ಪರ ಗೋಡೆ ಬರಹ ಪ್ರಕರಣ ➤ ಶಾರೀಕ್ ಎಂಬಾತ ಪ್ರಮುಖ ಆರೋಪಿ.!

 

 

error: Content is protected !!
Scroll to Top