ಜಮಾ ಮಸೀದಿಯ ಸಮೀಕ್ಷಾ ವರದಿ 10 ದಿನಗಳಲ್ಲಿ ಸಲ್ಲಿಕೆ ಮಾಡುವಂತೆ ಕೋರ್ಟ್ ಆದೇಶ- ವಿಚಾರಣೆ ಜನವರಿ 8ಕ್ಕೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com . 29. ಉತ್ತರ ಪ್ರದೇಶದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ಸಂಭಾಲ್ ನ ಜಾಮಾ ಮಸೀದಿ ಆವರಣದಲ್ಲಿನ ಸಮೀಕ್ಷಾ ವರದಿಯನ್ನು ಇನ್ನು 10 ದಿನಗಳಲ್ಲಿ ಸಲ್ಲಿಕೆ ಮಾಡುವಂತೆ ಉತ್ತರ ಪ್ರದೇಶ ಕೋರ್ಟ್ ಆದೇಶ ಶುಕ್ರವಾರ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿಕೆ ಮಾಡಿದೆ.

ಸಂಭಾಲ್ ನ ಜಾಮಾ ಮಸೀದಿಯನ್ನು ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆಗೆ ಉತ್ತರ ಪ್ರದೇಶ ಕೋರ್ಟ್ ಇಲ್ಲಿ ಸಮೀಕ್ಷೆಗೆ ಆದೇಶ ಸೂಚಿಸಿತ್ತು. ಇದಕ್ಕಾಗಿ ಸಮೀಕ್ಷಾ ತಂಡವನ್ನೂ ಕೂಡ ರಚನೆ ಮಾಡಿತ್ತು. ಆದರೆ ಸಮೀಕ್ಷೆಗೆ ಮುಸ್ಲಿಂ ಸಮುದಾಯದ ಕೆಲ ದುಷ್ಕರ್ಮಿಗಳು ಅಡ್ಡಿಪಡಿಸುತ್ತಿರುವ ಹಿನ್ನಲೆಯಲ್ಲಿ ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

Also Read  ರಾಮಕುಂಜ : ದೇವಸ್ಥಾನದ ವಠಾರದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

 

error: Content is protected !!
Scroll to Top