ಅಂಬುಲೆನ್ಸ್‌ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com . 29. ಅಂಬುಲೆನ್ಸ್‌ ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಮಧ್ಯಪ್ರದೇಶದ ಮೌಗಂಜ್‌ನಲ್ಲಿ ನಡೆದಿದ್ದು, ತಡವಾಗಿ (ನ.22ರಂದು) ಬೆಳಕಿಗೆ ಬಂದಿದೆ.

ಒಟ್ಟು ನಾಲ್ವರು ಆರೋಪಿಗಳಿದ್ದು, ಆ ಪೈಕಿ ಇಬ್ಬರು ಆರೋಗಳಾದ ಮೌಗಂಜ್ ಜಿಲ್ಲೆಯ ನೈಗರ್ಹಿ ತಹಸಿಲ್‌ನ ನಿವಾಸಿಗಳಾದ ಅಂಬ್ಯುಲೆನ್ಸ್ ಚಾಲಕ ವಿರೇಂದ್ರ ಚತುರ್ವೇದಿ ಹಾಗೂ ಆತನ ಸ್ನೇಹಿತ ರಾಜೇಶ ಕೇವತ್‌ನನ್ನು ಬಂಧಿಸಿದ್ದಾರೆ. ಮೌಗಂಜ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಪ್ರದೇಶ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು, ಮಕ್ಕಳು ಹಾಗೂ ಬಿಪಿಎಲ್ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಜನನಿ ಎಕ್ಸ್ಪ್ರೆಸ್ ಅಂಬುಲೆನ್ಸ್ ಸೌಲಭ್ಯ ಒದಗಿಸಿತ್ತು. ಈ 108 ಅಂಬುಲೆನ್ಸ್‌ ನಲ್ಲೇ ಕೃತ್ಯ ನಡೆದಿದೆ ಎನ್ನಲಾಗಿದೆ.

Also Read  ಉಡುಪಿ: ಪ್ರಥಮ ಕೊರೋನ ಪಾಸಿಟಿವ್ ಪತ್ತೆ

 

error: Content is protected !!
Scroll to Top