ಯುವತಿ ಮೇಲೆ ಅತ್ಯಾಚಾರ, ಕೊಲೆ ಆರೋಪ: ಸರಣಿ ಹಂತಕ ಅರೆಸ್ಟ್‌



(ನ್ಯೂಸ್ ಕಡಬ) newskadaba.com ಗಾಂಧಿನಗರ, . 29. ಗುಜರಾತ್‌ನ ವಲ್ಸಾದ್‌ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಹರಿಯಾಣದ 29 ವರ್ಷದ ಸರಣಿ ಹಂತಕನನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.





ಈ ಅತ್ಯಾಚಾರ ಎಸಗುವುದಕ್ಕೂ ಮುನ್ನ ಹಂತಕ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ರೈಲಿನಲ್ಲೇ ನಾಲ್ವರನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ನವೆಂಬರ್‌ 14ರಂದು ಉದ್ವಾಡ ರೈಲು ನಿಲ್ದಾಣದ ಸಮೀಪದ ಹಳಿಯ ಮೇಲೆ ಯುವತಿಯ ಶವ ಪತ್ತೆಯಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಹರಿಯಾಣದ ರೋಹ್ಟಕ್ ಮೂಲದ ರಾಹುಲ್ ಸಿಂಗ್ ಜಾಟ್ ಎಂಬಾತನ್ನ ನವೆಂಬರ್‌ 24ರಂದು ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.






 

error: Content is protected !!
Scroll to Top