ನಂದಾವರ: ನೇತ್ರಾವತಿ ನದಿಯಲ್ಲಿ ಮುಳುಗಿ ರೈತ ಮುಖಂಡ ಮೃತ್ಯು ► ಈ ಹಿಂದೆ ಕಡಬದ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದ ಶರತ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.24. ರೈತ ಹಸಿರು ಸೇನೆಯ ಸದಸ್ಯ, ಆರ್ ಟಿ ಐ ಕಾರ್ಯಕರ್ತರೋರ್ವರು ನೇತ್ರಾವತಿ ನದಿಯಲ್ಲಿ ಮುಳುಗಿದ ಘಟನೆ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಶನಿವಾರದಂದು ನಡೆದಿದೆ.

ಮೃತರನ್ನು ಹಲವರು ರೈತ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಮಾರ್ನಬೈಲು ನಿವಾಸಿ ಶರತ್( 48) ಎಂದು ಗುರುತಿಸಲಾಗಿದೆ. ಶರತ್ ಶನಿವಾರ ಬೆಳಗ್ಗೆ ತನ್ನ ಮನೆಯಿಂದ ನಂದಾವರ ದೇವಸ್ಥಾನಕ್ಕೆ ಹೋಗಿ, ನಂತರ ಸ್ನಾನ ಮಾಡಲು ನದಿಗೆ ತೆರಳಿದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಬಂಟ್ವಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಅಪಘಾತಗಳ ನಿಯಂತ್ರಣಕ್ಕೆ ಅಧಿಕಾರಿಗಳು ಶ್ರಮವಹಿಸಿ  - ಸಿಂಧೂ ಬಿ ರೂಪೇಶ್

error: Content is protected !!
Scroll to Top