ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಚಂದನಾ ಅನಂತಕೃಷ್ಣ

(ನ್ಯೂಸ್ ಕಡಬ) newskadaba.com ಬೆಂಗಳೂರು, . 29. ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಅವರು ಗುರುವಾರ(ನ.28)ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಜರುಗಿದೆ. ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ. ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಇತ್ತೀಚೆಗೆ ಕುಟುಂಬಸ್ಥರು ಸಮ್ಮುಖದಲ್ಲಿ ನಟಿಯ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಇಂದು ಅದ್ಧೂರಿಯಾಗಿ ಚಂದನಾ ಮತ್ತು ಪ್ರತ್ಯಕ್ಷ್ ಮದುವೆ ನಡೆದಿದೆ. ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

Also Read  ಖ್ಯಾತ ಮಲಯಾಳಂ ನಟ ಬಾಬುರಾಜ್ ಅರೆಸ್ಟ್

 

 

error: Content is protected !!
Scroll to Top