ಬೈಕ್‌ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಪ್ರಕರಣ:  ಸವಾರನಿಗೆ 2 ವರ್ಷ ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಪುತ್ತೂರು, . 29. ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಬೈಕ್‌ ಢಿಕ್ಕಿ ಹೊಡೆದು ಆಕೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಿಗೆ ಇಲ್ಲದ ಬೈಕ್‌ ಸವಾರನಿಗೆ ಕೋರ್ಟ್ ದಂಡ ವಿಧಿಸಿದ್ದು, ಬೈಕ್ ಮಾಲಿಕನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2022ರ ಫೆ.27ರಂದು ನೆಟ್ಟಣಿಗೆ ಮುಟ್ನೂರು ಕೊಟ್ಯಾಡಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಅಪಘಾತದ ವೇಳೆ ಮುಳಿಯೂರು ನಿವಾಸಿ ಶಾಹೀದ್‌ ಕೇರಳ ರಾಜ್ಯದ ನೋಂದಣಿಯ ಬೈಕ್ ಚಲಾಯಿಸುತ್ತಿದ್ದ. ಈತ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ದುಗ್ಗಮ್ಮ (55) ಅವರಿಗೆ ಢಿಕ್ಕಿ ಹೊಡೆದಿತ್ತು. ಈ ಬಗ್ಗೆ ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್‌ ವೈ.ಎಚ್‌.ಅವರ ಪೀಠ ಚಾಲನಾ ಪರವಾನಿಗೆ ಇಲ್ಲದ ಬೈಕ್‌ ಸವಾರ ಶಾಹೀದ್‌ಗೆ 5 ಸಾ.ರೂ. ದಂಡ ವಿಧಿಸಿದೆ.‌ ಹಾಗೂ ಬೈಕ್‌ ಮಾಲಕ ಮಹಮ್ಮದ್‌ ಶಾಕೀರ್‌ಗೆ 2 ವರ್ಷ ಜೈಲು ಶಿಕ್ಷೆ ಮತ್ತು 5 ಸಾ. ರೂ. ದಂಡ ವಿಧಿಸಿ ತೀರ್ಪು ನೀಡಿದೆ ಎಂದು ವರದಿ ತಿಳಿಸಿದೆ.

Also Read  ಅಪರಾಧ ಚಟುಚಟಿಕೆಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.➤ ಸಚಿವ ಯು.ಟಿ ಖಾದರ್ ಸ್ಪಷ್ಟ ಸೂಚನೆ

 

error: Content is protected !!
Scroll to Top