ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಆರೋಪಿಗಳ ಬಂಧನ – ಮೂರು ಪಿಸ್ತೂಲ್‌ಗಳು, ಕಾಟ್ರಿಡ್ಜ್‌ಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, . 27.  ಪಂಜಾಬ್‌ನ ಜಲಂಧರ್‌ನಲ್ಲಿ ಇಂದು ಬೆಳಿಗ್ಗೆ ಪೊಲೀಸರ ಚೇಸ್ ಮತ್ತು ಶೂಟೌಟ್‌ನಲ್ಲಿ ಕುಖ್ಯಾತ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಮೂರು ಪಿಸ್ತೂಲ್‌ಗಳು ಮತ್ತು ಹಲವಾರು ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆನ್ನಟ್ಟಿದ ವೇಳೆ ಶಂಕಿತರು ಪೊಲೀಸರತ್ತ ಗುಂಡು ಹಾರಿಸಿದ್ದು, ಪೊಲೀಸರು ಪ್ರತೀಕಾರವಾಗಿ ಗುಂಡು ಹಾರಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಸುಲಿಗೆ, ಕೊಲೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಡ್ರಗ್ಸ್ ಕಾನೂನು ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಶಾದ್ಯಂತ ಸುಮಾರು 700 ಶೂಟರ್‌ಗಳನ್ನು ಹೊಂದಿರುವ ಬಿಷ್ಣೋಯ್ ಗ್ಯಾಂಗ್, ಪಂಜಾಬಿ ರಾಪರ್ ಸಿಧು ಮೂಸೆವಾಲಾ ಮತ್ತು ರಾಜಕೀಯ ಬಾಬಾ ಸಿದ್ದಿಕ್ ಸೇರಿದಂತೆ ಹಲವಾರು ಕೊಲೆಗಳನ್ನು ಮಾಡಿದ್ದು ತನಿಖೆ ಮುಂದುವರಿದಿದೆ. ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಇದರ ನೇತೃತ್ವ ವಹಿಸಿದ್ದಾರೆ.

Also Read  ಸುಬ್ರಹ್ಮಣ್ಯ: ಮುಜರಾಯಿ ದೇವಾಲಯಗಳಲ್ಲಿ ಪ್ರತೀ ತಿಂಗಳು ಎರಡು ಬಾರಿ ಸಪ್ತಪದಿ ಕಾರ್ಯಕ್ರಮ ➤ ಕೋಟ ಶ್ರೀ ನಿವಾಸ್ ಪೂಜಾರಿ

error: Content is protected !!
Scroll to Top