(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ 4ನೇ ವಾರ್ಷಿಕ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ಮಾ.25 ಮತ್ತು 26ರಂದು ನಡೆಯಲಿದ್ದು ಮಾ.25 ರಂದು ಬೆಳಿಗ್ಗೆ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ ಬಳಿಕ ಭಕ್ತಾಧಿಗಳಿಂದ ಕ್ಷೇತ್ರ ಸ್ವಚ್ಚತೆ, ಅಲಂಕಾರ ಸೇವೆ, ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ರಾತ್ರಿ ಪೂಜೆ ನಡೆಯಲಿದೆ.
ಮಾ.26ರಂದು ಪ್ರಾತಃಕಾಲ ನಿತ್ಯಪೂಜೆ, ಮಹಾಗಣಪತಿ ಹೋಮ, ಬಿಂಬ ಶುದ್ದಿ, ಕಲಶಪೂಜೆ, ಮದ್ಯಾಹ್ನ ಕಲಶಾಭಿಷೇಕ, ದೇವರುಗಳ ವಾರ್ಷಿಕ ಪ್ರತಿಷ್ಠಾ ದಿನದ ಪೂಜೆ,ಕಲಶಾಭಿಷೇಕ,ದೈವಗಳಿಗೆ ತಂಬಿಲ, ನೂತನ ವಸಂತಕಟ್ಟೆಯ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲ ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 6ರಿಂದ ದೀಪಾರಾಧನೆ, ತಾಯುಬಕಂ, ಮಹಾಪೂಜೆ. ಶ್ರೀ ದೇವರ ಬಲಿ ಹೊರಟುನ ಉತ್ಸವ, ಭೂತ ಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣಪ್ರಸಾದ, ವೈಧಿಕ ಮಂತ್ರಾಕ್ಷತೆ,ಅನ್ನಸಂತರ್ಪಣೆ ನಂತರ ಓಂಕಾರ ಸೇವಾ ಸಮಿತಿಯ ಆರೇಲ್ತಡಿ ಇದರ ಸೇವಾ ರೂಪವಾಗಿ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಪ್ರದರ್ಶನ ಬಾಗ್ಯದ ಬಂಗಾರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ