ಉಡುಪಿ: ‘ಇಸ್ಕಾನ್ ಧಾರ್ಮಿಕ ನಾಯಕರ ಬಂಧನ ಖಂಡನೀಯ’- ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, . 27.  ಬಾಂಗ್ಲಾದೇಶದಲ್ಲಿ ಇಸ್ಕಾನ್ ಧಾರ್ಮಿಕ ನಾಯಕರ ಬಂಧನವಾಗಿರುವುದು ತೀರಾ ಕಳವಳಕಾರಿ ಸಂಗತಿಯಾಗಿದ್ದು, ಇದು ಅತ್ಯಂತ ಖಂಡನೀಯ ವಿಚಾರವಾಗಿದೆ ಎಂದು ಉಡುಪಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದೇಶದ ಇಸ್ಕಾನ್ ಗುರು ಚಿಣ್ಮೊಯ್ ದಾಸ್ ಅವರನ್ನು ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಬಂಧಿಸಿದ ವಿಚಾರವನ್ನು ಅವರು ತೀವ್ರವಾಗಿ ಖಂಡಿಸಿ, ಮಾತನಾಡುತ್ತಿದ್ದರು. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿ ಸಮರ್ಥನೀಯವಲ್ಲ. ಬಾಂಗ್ಲಾದೇಶ ಎಲ್ಲಾ ಧರ್ಮಯರಿಗೂ ಅವಕಾಶ ನೀಡುವ ರಾಷ್ಟ್ರ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಈ ನಿಲುವು ಸರಿಯಲ್ಲ. ಹಾಗಾಗಿ ಕೂಡಲೇ ಬಾಂಗ್ಲಾದೇಶದ ಇಸ್ಕಾನ್ ಧಾರ್ಮಿಕ ನಾಯಕರನ್ನು ಬಿಡುಗಡೆ ಮಾಡಬೇಕಿದೆ. ಅಲ್ಲದೆ ಅಲ್ಲಿನ ಹಿಂದೂಗಳಿಗೆ ರಕ್ಷಣೆ ನೀಡಬೇಕು. ಅದೂ ಅಲ್ಲದೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.

Also Read  ಬೆಳ್ತಂಗಡಿ: ದನಗಳ್ಳರು ಎಂದು ಆರೋಪಿಸಿ ಅಮಾಯಕರ ಮೇಲೆ ಹಲ್ಲೆ ಪ್ರಕರಣ ➤ ಏಳು ಮಂದಿ ಆರೋಪಿಗಳ ಬಂಧನ

error: Content is protected !!
Scroll to Top