(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 27. ದಕ್ಷಿಣ ಕನ್ನಡ: ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಮೂಲ ಮೃತ್ತಿಕೆ ಪ್ರಸಾದವನ್ನು ವಿತರಿಸಲಾಗಿದೆ. ಚಂಪಾಷಷ್ಠಿ ಜಾತ್ರೆ ಆರಂಭಕ್ಕೂ ಮೊದಲು ಮೂಲ ಗರ್ಭಗುಡಿಯ ಹುತ್ತದಿಂದ ಮೃತಿಕೆ ಪ್ರಸಾದವನ್ನು ತೆಗೆಯಲಾಗುತ್ತದೆ. ಮೂಲ ಮೃತ್ತಿಕೆ ಪ್ರಸಾದಕ್ಕೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಭಕ್ತರು ಸರತಿಸಾಲಿನಲ್ಲಿ ನಿಂತು ಈ ಪ್ರಸಾದವನ್ನು ಸ್ವೀಕರಿಸಿದ್ದಾರೆ.
ಕುಕ್ಕೆಯ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ಮೂಲ ಮೃತ್ತಿಕೆ ಪ್ರಸಾದವನ್ನು ವಿತರಣೆ ಮಾಡಲಾಗಿದೆ. ಮೂಲ ಗರ್ಭಗುಡಿಯ ಹುತ್ತದಿಂದ ತೆಗೆಯುವ ಪವಿತ್ರ ಪ್ರಸಾದವೇ ಮೂಲ ಮೃತ್ತಿಕೆ. ಹುತ್ತದ ಮಣ್ಣನ್ನೇ ಇಲ್ಲಿ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಮಣ್ಣಿನ ಪ್ರಸಾದಕ್ಕೆ ಮೊದಲ ಆದ್ಯತೆಯಿದ್ದು, ಬಳಿಕವೇ ಗಂಧ ಪ್ರಸಾದ ಮೊದಲಾದವುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.