ಗೌತಮ್ ಅದಾನಿ ವಿರುದ್ಧ ಲಂಚ ಪ್ರಕರಣ ದಾಖಲಾಗಿಲ್ಲ: ಅದಾನಿ ಗ್ರೂಪ್‌ನಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, . 27.  ಭಾರತದ 2ನೇ ಅತಿ ದೊಡ್ಡ ಶ್ರೀಮಂತ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್‌ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವಿನೀತ್ ಜೈನ್ ಅವರ ವಿರುದ್ಧ ಅಮೆರಿಕದಲ್ಲಿ ಯಾವುದೇ ಲಂಚದ ಪ್ರಕರಣ ದಾಖಲಾಗಿಲ್ಲ ಎಂದು ಅದಾನಿ ಗ್ರೂಪ್ ಹೇಳಿದೆ. ಅದಾನಿ ಗ್ರೂಪ್‌ನ ಅಧೀನದಲ್ಲಿರುವ ಅದಾನಿ ಗ್ರೀನ್ ಕೂಡ ಅಮೆರಿಕದಲ್ಲಿ ಗೌತಮ್‌ ಅದಾನಿ ವಿರುದ್ದ ಕೇಳಿ ಬಂದ ಲಂಚದ ಆರೋಪವನ್ನು ನಿರಾಕರಿಸಿದೆ.

ʼʼಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಅಮೆರಿಕದ ಫಾರಿನ್‌ ಕರಪ್ಟ್‌ ಪ್ರಾಕ್ಟೀಸಸ್‌ ಆ್ಯಕ್ಟ್‌ ಉಲ್ಲಂಘನೆಯ ಆರೋಪ ಹೊರಿಸಲಾಗಿಲ್ಲ” ಎಂದು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸ್ಪಷ್ಟನೆ ನೀಡಿದೆ.

Also Read  ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಟ್ವಿಸ್ಟ್ ➤ ಬಸ್ ನಿರ್ವಾಹಕ ಅರೆಸ್ಟ್

error: Content is protected !!
Scroll to Top