ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಹಲ್ಲೆ: 8 ಮಂದಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಳಗಾವಿ, . 26. ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ಕಲ್ಯಾಣ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೋಟೋಗ್ರಾಫರ್ ಉಮೇಶ್ ಹೊಸೂರು ಅಪಹರಣವಾಗಿ ಹಲ್ಲೆಗೊಳಗಾಗಿ ವ್ಯಕ್ತಿ. ಇವರು ಬೈಲಹೊಂಗಲ ಪಟ್ಟಣದಲ್ಲಿ ನೆಲೆಸಿದ್ದಾರೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಅಂತಾ ಬೆಳಗಾವಿ ನಗರಕ್ಕೆ ಬಂದಿದ್ದರು. ಈ ವೇಳೆ ಆತನನ್ನ ಹಿಂಬಾಲಿಸಿಕೊಂಡು ನಾಲ್ವರು ಬಂದಿದ್ದರು. ಕಲ್ಯಾಣ ಮಂಟಪಕ್ಕೆ ಬಂದು ಹೊರಗೆ ಕರೆದುಕೊಂಡು ಹೋಗಿ ಅಲ್ಲಿಂದ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ.

Also Read  ಯುವತಿಯ ಮಾನಹಾನಿಯಾಗುವಂತೆ ವರ್ತಿಸಿದ ಆರೋಪಿಗೆ ಶಿಕ್ಷೆ

 

error: Content is protected !!
Scroll to Top