ಪಿಕಪ್‌: ಕಾರು ಡಿಕ್ಕಿ: ವಾಹನ ಜಖಂ, ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, . 26. ಅರಂಬೂರು ಬಳಿ ಮಡಿಕೇರಿಯಿಂದ ಸುಳ್ಯ ಕಡೆಗೆ ತರಕಾರಿ ತುಂಬಿಕೊಂಡು ಬರುತ್ತಿರುವ ಪಿಕಪ್ ವಾಹನಕ್ಕೆ ಸುಳ್ಯ ಕಡೆಯಿಂದ ಪೆರಾಜೆ ಕಡೆಗೆ ಹೊಗುತ್ತಿದ್ದ ಅಲ್ಟೊಕಾರು ಡಿಕ್ಕಿಯಾಗಿ ಕಾರು ಮತ್ತು ಪಿಕಪ್ ಸ್ವಲ್ಪ ಜಖಂಗೊಂಡ ಘಟನೆ ನ 24 ರಂದು ರಾತ್ರಿ ಸಂಭವಿಸಿದೆ.

ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ಕುರಿತು ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ /ಸೌಹಾರ್ದಾ ಸಹಕಾರ ಸಂಘಗಳ ಕಾಯಿದೆ ➤ ಆ.31 ರೊಳಗೆ ಲೆಕ್ಕಶೋಧನಾ ವರದಿ ಸಲ್ಲಿಸುವಂತೆ ಮನವಿ

 

error: Content is protected !!
Scroll to Top