ಕೊಪ್ಪಳದಲ್ಲಿ ಅಪರೂಪದ ಉರಿ ಉಯ್ಯಾಲಿನ ಶಾಸನ ಶಿಲ್ಪಗಳು ಪತ್ತೆ

(ನ್ಯೂಸ್ ಕಡಬ)newskadaba.com  ಕೊಪ್ಪಳ, ನ.25:  ಕೊಪ್ಪಳದ ಬೀಳಗಿ ಗ್ರಾಮದ ಕೆರೆಯ ಹತ್ತಿರ ಉರಿ ಉಯ್ಯಾಲಿನ ಶಾಸನ ಶಿಲ್ಪಗಳು ಪತ್ತೆಯಾಗಿವೆ. ಬಲಿದಾನ ಸ್ಮಾರಕ ಶಿಲ್ಪಗಳ ಗುಂಪಿಗೆ ಸೇರಿದ ಶಾಸನ ಇದಾಗಿದೆ ಎಂದು  ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಆತ್ಮ ಬಲಿದಾನಗಳಲ್ಲಿ ಒಂದಾದ ಈ ಹರಕೆಯು ಬಹಳ ವಿರಳ ಮತ್ತು ವಿಶೇಷವಾದುದಾಗಿದೆ. ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ತೊಣಚಿ ಗ್ರಾಮದ ಶಾಸನದಲ್ಲಿ ಉರಿ ಉಯ್ಯಾಲೆಯ ಉಲ್ಲೇಖವಿದೆ. ಈ ರೀತಿಯ ಶಿಲ್ಪಗಳು ಕರ್ನಾಟಕದಲ್ಲಿ ಬೆರಳೆಣಕಿಯಷ್ಟು ದೊರೆತಿವೆ ಎಂದು ಹೇಳಲಾಗಿದೆ.ಈ ಶಾಸನಗಳು ಮೂರು ಹಂತಗಳನ್ನು ಒಳಗೊಂಡಿವೆ. ಅವು 9ನೇ ಶತಮಾನದ್ದು ಎಂದು ನಂಬಲಾಗಿದೆ. ಈ ಶಿಲ್ಪಗಳು ಕರ್ನಾಟಕದಲ್ಲಿ ಅಪರೂಪವಾಗಿ ದೊರೆಯುವ ಪ್ರಮುಖ ಐತಿಹಾಸಿಕ ಸಾಕ್ಷ್ಯಗಳಾಗಿವೆ ಎಂದು ಇತಿಹಾಸಕಾರರು ಹೇಳುತ್ತಾರೆ.

Also Read  ಸವಾರನ ಅಜಾಗರೂಕತೆಯಿಂದ ಸ್ಕೂಟರ್ ಪಲ್ಟಿ ➤ ಸವಾರರಿಬ್ಬರಿಗೆ ಗಾಯ

error: Content is protected !!
Scroll to Top