ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದೂ ಸಂಘಟನೆ ಕಾರ್ಯಾಚರಣೆ: 25 ಕ್ಕೂ ಅಧಿಕ ಜಾನುವಾರು ರಕ್ಷಣೆ

(ನ್ಯೂಸ್ ಕಡಬ)newskadaba.com ಚಾಮರಾಜನಗರ, ನ.25. ತಮಿಳುನಾಡಿನ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ 25 ಕ್ಕೂ ಅಧಿಕ‌ ಜಾನುವಾರುಗಳನ್ನು ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಕ್ಷಿಸಿರುವ ಘಟನೆ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ ಬಳಿ ನಡೆದಿದೆ.

ಟಿ.ನರಸೀಪುರ ಕಡೆಯಿಂದ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯಿಂದ ಹಿಂದೂ ಸಂಘಟನೆ  ಕಾರ್ಯಕರ್ತರು 5 ವಾಹನಗಳನ್ನು ತಡೆದು 25 ಕ್ಕೂ ಅಧಿಕ ಎಮ್ಮೆ, ಹಸುಗಳನ್ನು ರಕ್ಷಣೆ ಮಾಡಿದ್ದಾರೆ.

Also Read  ಸಿಬಿಎಸ್ಸಿ ಪರೀಕ್ಷೆ: ಕಡಬದ ಹಾಜಿರಾ ನಸೀರ್ 100% ದಲ್ಲಿ ಉತ್ತೀರ್ಣ

 

 

error: Content is protected !!
Scroll to Top