ಬಿಳಿನೆಲೆ: ಮಹಿಳಾ ವಿಚಾರಗೋಷ್ಠಿ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ಮಹಿಳೆ ಸಮಾಜದಲ್ಲಿ ಯಶಸ್ವಿಯಾಗಬೇಕಾದರೆ ಇಚ್ಚಾ ಶಕ್ತಿಯೊಂದಿಗೆ ಮನೆಯವರ ಸಹಕಾರ ಅಗತ್ಯ- ಶಾಸಕಿ ಭಾಗೀರಥಿ ಮುರುಳ್ಯ

(ನ್ಯೂಸ್ ಕಡಬ) newskadaba.com ನ. 25. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಜ್ಞಾನವಿಕಾಸ ಕೇಂದ್ರಗಳು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬಿಳಿನೆಲೆ ವಲಯ ಹಾಗೂ ವೇದವ್ಶಾಸ ವಿದ್ಯಾಲಯ ಮತ್ತು ಗೋಪಾಲಕೃಷ್ಣ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಬಿಳಿನೆಲೆ ವೇದವ್ಶಾಸ ಸಭಾಭವನದಲ್ಲಿ ತಾಲೂಕು ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮಕ್ಕೆ ತೆಂಗಿನ ಹಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಶ ಮಾತನಾಡಿ, ಸಮಾಜದ ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆಯು ತನ್ನ ಚಾಪು ಮೂಡಿಸಿರುವುದರಿಂದ ಸಮಾಜದ ಸ್ವಾಸ್ಥ್ಶ ಸುಧಾರಣೆಯಾಗಲು ಸಹಕಾರಿಯಾಗಿರುತ್ತದೆ. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಲ್ಲಿ ದೊರೆಯುವ ಮಾಹಿತಿ ಹಾಗೂ ಅಭಿವೃಧ್ಧಿ ಚಟುವಟಿಕೆಗಳಲ್ಲಿ ಮಹಿಳೆಯೊಬ್ಬಳು ಇಚ್ಚಾಶಕ್ತಿ ಹಾಗೂ ಮನೆಯವರ ಸಹಕಾರದೊಂದಿಗೆ ತೊಡಗಿಸಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು. ಧರ್ಮಸ್ಥಳ ಗ್ರಾಮಾಭಿವಧ್ಧಿ ಯೋಜನೆ ಕರಾವಳಿ ಪ್ರಾದೇಶಿಕ ವ್ಶಾಪ್ತಿಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇ ಗೌಡರವರು ಮುಖ್ಶ ಅಥಿತಿಯಾಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಅಧ್ಶಕ್ಷತೆಯಲ್ಲಿ ಸಮಾಜ ಸುಧಾರಣೆಯೊಂದಿಗೆ ಮಹಿಳಾ ಸನಲೀಕರಣ, ಮಹಿಳೆಯರ ಪ್ರತಿಭೆಯ ಅನಾವರಣ ಹಾಗೂ ಆರ್ಥಿಕ ಸೌಲಭ್ಯಗಳಲ್ಲಿ ಶಿಸ್ತುಬದ್ದ ವ್ಶವಹಾರದ ಕುರಿತಾಗಿ ಮಾಹಿತಿ ದೊರೆಯಲು ಸಹಕಾರಿಯಾಗಿದ್ದು, ಶಿಸ್ತಿನ ಸಿಪಾಯಿಗಳಾಗಿ ರೂಪುಗೊಳ್ಳಲು ಜ್ಞಾನವಿಕಾಸ ಕೇಂದ್ರದ ಸಭೆ ಸಹಕಾರಿಯಾಗಿದೆ ಎಂದರು.

Also Read  ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಓಣಂ ಆಚರಣೆ

ಪುತ್ತೂರು ಮಹಿಳಾ ಪೋಲಿಸ್ ಠಾಣೆಯ ಪಿಎಸ್ಐ ಶ್ರೀಮತಿ ಸವಿತಾ ರವರು ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉಧ್ಘಾಟನೆ ಮಾಡಿ ಮಾತನಾಡಿ, ಮಹಿಳೆಯೊಬ್ಬಳು ಸಬಳೆಯಾಗಲು ಕಾನೂನು ಅರಿವೂ ಅತೀ ಅಗತ್ಶವಾಗಿದ್ದು ಕಾನೂನಿನ ಎಲ್ಲಾ ಮಾಹಿತಿಗಳು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜ್ಞಾನವಿಕಾಸದ ತಿಂಗಳ ಸಭೆಯಲ್ಲಿ ದೊರೆಯುತ್ತದೆ ಹಾಗೂ ಇಲಾಖೆಗಳಿಗೆ ಬೇಟಿನೀಡಿಯೂ ಮಾಹಿತಿ ಪಡೆದುಕೊಳ್ಳಲು ಜ್ಞಾನವಿಕಾಸ ಕಾರ್ಯಕ್ರಮ ಸಹಕಾರಿ ಎಂದರು. ಕಾರ್ಯಕ್ರಮದ ಅಧ್ಶಕ್ಷತೆಯನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಶಕ್ಷೆ ಶ್ರೀಮತಿ ಶಾರದಾ ದಿನೇಶ್ ವಹಿಸಿದ್ದರು. ಒತ್ತಡ ನಿರ್ವಹಣೆಯೊಂದಿಗೆ ಯಶಸ್ವಿ ಹೆಜ್ಜೆಯತ್ತ ಮಹಿಳೆ ವಿಚಾರದ ಮಂಡನೆಯನ್ನು ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾದ್ಶಮ ಶಾಲೆಯ ಮುಖಗಯಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ನಡೆಸಿಕೊಟ್ಟರು. ಜ್ಞಾನವಿಕಾಸ ಕೇಂದ್ರದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಹೂಗುಚ್ಚ ತಯಾರಿ ಹಾಗೂ ಜಾನಪದ ನೃತ್ಯ ಸ್ಪರ್ಧೆಯು ನಡೆಯಿತು. ನತ್ಶ ಸ್ಷರ್ಧೆಯ ತೀರ್ಪುಗಾರರಾಗಿ ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರ ಪ್ರಶಸ್ತಿ ವಿಜೇತೆ ಗ್ರಂಥಾಲಯದ ಪಾಲಕಿ ಶಾರದಾ ಪಾಲೆತ್ತಾರು, ಪುತ್ತಿಲ ಬೈಲಡ್ಕ ಪ್ರಾಥಮಿಕ ಶಾಲಾ ಶಿಕ್ಷಕ ರಾಮಣ್ಣ ಬಜೆಂತ್ರಿ, ವಿಟ್ಲ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾ ಸಹಕರಿಸಿದರು. 19ಕೇಂದ್ರಗಳ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನು ಬೃಂದಾವನ ಜ್ಞಾನವಿಕಾಸ ಕೇಂದ್ರ ಮಾದೇರಿ, ದ್ವಿತೀಯ ಸ್ಥಾನವನ್ನು ಶ್ರೀದೇವಿ ಜ್ಞಾನವಿಕಾಸ ಕೇಂದ್ರ ಶಿವಾರು, ತೃತೀಯ ಸ್ಥಾನವನ್ನು ಜ್ಞಾನದೀಪ ಜ್ಞಾನ ವಿಕಾಸ ಕೇಂದ್ರ ಬಿಳಿನೆಲೆ, ಚತುರ್ಥ ಸ್ಥಾನವನ್ನು ಧರ್ಮಶ್ರೀ ಜ್ಞಾನವಿಕಾಸ ಕೇಂದ್ರ ಕೌಕ್ರಾಡಿ, ಐದನೇ ಸ್ಥಾನವನ್ನು ಜ್ಞಾನದೀಪ ಜ್ಞಾನವಿಕಾಸ ಕೇಂದ್ರ ದೊಡ್ಡಕೊಪ್ಪದ ಸದಸ್ಶರುಗಳು ಪಡೆದುಕೊಂಡರು.

Also Read  ನಿಗಮದಿಂದ ಯುವಕರಿಗೆ ಬೈಕ್ ಖರೀದಿಗೆ ಸಾಲ -ಅರ್ಜಿ ಆಹ್ವಾನ


ಕಾರ್ಯಕ್ರಮದ ವೇದಿಕೆಯಲ್ಲಿ ವೇದವ್ಶಾಸ ವಿದ್ಶಾಲಯದ ಮುಖ್ಶೋಪಾಧ್ಯಾಯರಾದ ಪ್ರಶಾಂತ್ ಬಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸಂತೋಷ್ ಕೇನ್ಯ, ತಾಲೂಕು ಜನಜಾಗೃತಿ ವೇದಿಕೆ ಅಧ್ಶಕ್ಷ ಮಹೇಶ್ ಕೆ ಸವಣೂರು, ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗು, ತಾಲೂಕು ಭಜನಾಪರಿಷತ್ ಅಧ್ಶಕ್ಷ ಸುಂದರ ಗೌಡ ಒಗ್ಗು, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಬಿಳಿನೆಲೆ ಜ್ಞಾನದೀಪಾ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಉಷಾ ಸತೀಶ್, ಜನಜಾಗೃತಿ ಸದಸ್ಶರಾದ ಗೋಪಾಲಕೃಷ್ಣ ಭಟ್, ಶಿವಪ್ರಸಾದ್ ರೈ ಮೈಲೇರಿ, ತಾಲೂಕು ಶೌರ್ಯ ಘಟಕದ ಮಾಸ್ಟರ್ ಪ್ರಶಾಂತ್ ಎನ್ ಎಸ್, ಕ್ಯಾಪ್ಟನ್ ಭವಾನಿಶಂಕರ ಹಾಗೂ ಬಿಳಿನೆಲೆ ಗ್ರಾಮದ ಹಿರಿಯರಾದ ಉಮೇಶ್ ಗೌಡ ಎರ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟನೆಗೆ ಬಿಳಿನೆಲೆ ವಲಯದ ಸೇವಾಪ್ರತಿನಿಧಿಗಳಾದ ಸತೀಶ್ ಬಿಳಿನೆಲೆ, ದಿನೇಶ್ ನೆಕ್ಕಿಲಾಡಿ, ಜ್ಞಾನ ಸೆಲ್ವೀ ಕೊಡಿಂಬಾಳ, ರೇಖಾ ಸುಳ್ಶ, ಗಣೇಶ್ ಕೊಂಬಾರು, ಗಣೇಶ್ ಐತ್ತೂರು, ಬೇಬಿ ಕೊಣಾಜೆ, ನೇತ್ರ ಬಂಟ್ರ, ವಿನೋದ್ ಕೆಸಿ ಶಿರಿಬಾಗಿಲು ಮತ್ತು ಭವ್ಯ ಕೈಕಂಬ ಸಹಕರಿಸಿದರು. ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಎನ್. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಬಿಳಿನೆಲೆ ವಲಯದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದಗೈದರು.

error: Content is protected !!
Scroll to Top