ಹೊಸ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರ ಆರಂಭಿಸಿದ ಡೊನಾಲ್ಡ್ ಟ್ರಂಪ್

(ನ್ಯೂಸ್ ಕಡಬ)newskadaba.com  ವಾಷಿಂಗ್ಟನ್, ನ.25. ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ನವೀನ ವ್ಯವಹಾರ ಆರಂಭಿಸಿದ್ದಾರೆ. ಹೊಸದಾಗಿ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರವನ್ನು ಪ್ರಾರಂಭಿಸಿದ್ದು, ಈ ಗಿಟಾರ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವ್ಯವಹಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಘೋಷಿಸಿದ್ದಾರೆ.

ಟ್ರಂಪ್ ಅವರ ಆಟೋಗ್ರಾಫ್ ಹೊಂದಿರುವ ಎಲೆಕ್ಟ್ರಿಕ್ ಗಿಟಾರ್‌ಗಳಿಗೆ ವಿಶೇಷ ಬೆಲೆ ನಿಗದಿಪಡಿಸಲಾಗಿದೆ. ಟ್ರಂಪ್ ಸಹಿ ಮಾಡಿರುವ ಗಿಟಾರ್ ಗಳ ಬೆಲೆ 10 ಸಾವಿರ ಡಾಲರ್ (8.45 ಲಕ್ಷ ರೂ.) ಎಂದು ಘೋಷಿಸಲಾಗಿದ್ದು, ಸಹಿ ಹಾಕಿದ ಗಿಟಾರ್​ ಕೇವಲ 275 ಮಾತ್ರ ಇವೆ ಎಂದು ಹೇಳಲಾಗಿದೆ. ಒಟ್ಟು ನಾಲ್ಕು ಬಗೆಯ ಗಿಟಾರ್‌ಗಳನ್ನು ಮಾರಾಟ ಮಾಡುವುದಾಗಿ ‘ಟ್ರಂಪ್ ಗಿಟಾರ್ಸ್’ ವೆಬ್‌ಸೈಟ್ ಬಹಿರಂಗಪಡಿಸಿದೆ.

Also Read  ಕೊರೋನ ವೈರಸ್‌ಗೆ ಒಂದೇ ದಿನ ಅಮೆರಿಕಾದಲ್ಲಿ 2,600 ಜನ ಬಲಿ, ಸೋಂಕಿತರ ಪ್ರಮಾಣವೂ ಹೆಚ್ಚಳ

 

error: Content is protected !!
Scroll to Top