ವಿಶ್ವ ಮೀನುಗಾರಿಕಾ ದಿನಾಚರಣೆ- ಸಾಧನೆ ಗೈದ ಹಲವರಿಗೆ ಪ್ರಶಸ್ತಿ ಗೌರವ

(ನ್ಯೂಸ್ ಕಡಬ)newskadaba.com  ಮುರುಡೇಶ್ವರ, ನ.25. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆಯಲ್ಲಿ ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆಯ ವತಿಯಿಂದ ಮೀನುಗಾರಿಕಾ ಕ್ಷೇತ್ರದಲ್ಲಿ ಸಾಧನೆ ಗೈದ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಸಂಧರ್ಭದಲ್ಲಿ ಕರಾವಳಿ ವಲಯದಲ್ಲಿ ಅತ್ಯುತ್ತಮ ಮೀನುಗಾರಿಕೆ ಉದ್ಯಮ ಪ್ರಶಸ್ತಿಯನ್ನು ಮಂಗಳೂರಿನ ಎಸ್. ಎಂ ಇಬ್ರಾಹಿಂ ಯು.ಕೆ.ಬಿ ಅವರು ಪಡೆದಿದ್ದು, ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ನೀಡಿ ಗೌರವಿಸಿದ್ದಾರೆ. ಈ ವೇಳೆ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ, ಉದ್ಯಮಿ ಮಜೀದ್ ಪಿ.ಪಿ, ಎಚ್.ಎಂ.ಎಫ್ ಕಂಪೆನಿಯ ಮುಖ್ಯಸ್ಥ ಹಾಜಿ ಮುಸ್ತಾಕ್, ಕುದ್ರೋಳಿ ಐಕ್ಯತಾ ವೇದಿಕೆ ಅಧ್ಯಕ್ಷ ಯಾಸೀನ್, ಮೆಹೆಪಿಲೆ ಸಮ ಗ್ರೂಪ್ ಸದಸ್ಯರು ಶುಭಹಾರೈಸಿದರು.

Also Read  ನ್ಯುಮೋನಿಯಾ ಜ್ವರಕ್ಕೆ ತುತ್ತಾಗಿ ಬಾಲಕಿ ನಿಧನ

 

error: Content is protected !!