ಗಯಾನಾ ಅಧ್ಯಕ್ಷ ಇರ್ಫಾನ್ ಅಲಿಗೆ ಚನ್ನಪಟ್ಟಣ ಗೊಂಬೆಯನ್ನು ಉಡುಗೊರೆ ನೀಡಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com . 23. ಗಯಾನಾ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಇರ್ಫಾನ್ ಅಲಿಗೆ ಚನ್ನಪಟ್ಟಣ ಗೊಂಬೆಯನ್ನು ಉಡುಗೊರೆ ಮಾಡಿದ್ದಾರೆ.

5 ದಿನಗಳ ಕಾಲ ಮೂರು ದೇಶಗಳ ಪ್ರವಾಸ ಮುಗಿಸಿ ನ.22ರಂದು ಮೋದಿ ಭಾರತಕ್ಕೆ ಹಿಂತಿರುಗಿದ್ದಾರೆ. ಮೋದಿ ಅವರು ಗಯಾನಾ, ಬೆಜ್ರಿಲ್ ಹಾಗೂ ನೈಜೀರಿಯಾ ಪ್ರವಾಸ ಮಾಡಿದ್ದು, ಒಟ್ಟು 31 ನಾಯಕರನ್ನು ಭೇಟಿ ಮಾಡಿದ್ದಾರೆ. ಮೋದಿ ಅವರು ತಾವು ಭೇಟಿಯಾದ ನಾಯಕರಿಗೆ ಭಾರತದ ಶ್ರೀಮಂತಿಕೆಯನ್ನು ಸಾರುವ ಉಡುಗೊರೆಗಳನ್ನು ನೀಡಿದ್ದಾರೆ. ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಮಗ ಲಿಲನ್ ಅಲಿಗೆ ಗೊಂಬೆಗಳಿಗೆ ಪ್ರಸಿದ್ಧವಾದ ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆ ರೈಲನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

Also Read  ನ. 18 ರಂದು ಕೆ.ಎಂ.ಎಫ್. ವತಿಯಿಂದ ಕೌಶಲ್ಯಾಭಿವೃದ್ಧಿ ದಿನಾಚರಣೆ

 

error: Content is protected !!
Scroll to Top