ಷೇರುಪೇಟೆಯಲ್ಲಿ ಭಾರಿ ಜಿಗಿತ: ಸೆನ್ಸೆಕ್ಸ್ ನಲ್ಲಿ 2000 ಪಾಯಿಂಟ್ಸ್ ಜಂಪ್

(ನ್ಯೂಸ್ ಕಡಬ) newskadaba.com ಮುಂಬೈ , ನ.22.   ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ಶುಕ್ರವಾರ ಮತ್ತೆ ಚೇತರಿಕೆ ಕಂಡಿವೆ. ಸೆನ್ಸೆಕ್ಸ್‌ 2,000 ಅಂಕಗಳ ಏರಿಕೆ ದಾಖಲಿಸಿ 79,117ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 557 ಅಂಕಗಳ ಏರಿಕೆಯೊಂದಿಗೆ 23,900ಕ್ಕೆ ದಿನದಾಟ ಪೂರ್ಣಗೊಳಿಸಿತು. ಆ ಮೂಲಕ ಹಿಂದಿನ ಸೆಷನ್‌ನಲ್ಲಿ ಐದು ತಿಂಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ. ಈ ಚೇತರಿಕೆ ಅಮೆರಿಕ ಕಾರ್ಮಿಕ ಮಾರುಕಟ್ಟೆಗೆ ಉತ್ತೇಜನ ನೀಡಲಿದೆ.

ICICI ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, SBI, Infosys, ITC, ಮತ್ತು L&T. ITC, TCS, ಭಾರ್ತಿ ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್‌ನಂತಹ ಇತರ ಷೇರುಗಳು ಸಹ ಗಣನೀಯ ಏರಿಕೆ ಕಂಡಿವೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಸುಮಾರು 3 ಪ್ರತಿಶತದಷ್ಟು ಏರಿದರೆ, ನಿಫ್ಟಿ ಬ್ಯಾಂಕ್, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಐಟಿ, ಮೆಟಲ್, ಹೆಲ್ತ್‌ಕೇರ್ ಮತ್ತು ತೈಲ ಮತ್ತು ಅನಿಲ ವಲಯಗಳು ಶೇಕಡಾ 1-2 ರಷ್ಟು ಲಾಭವನ್ನು ಕಂಡವು.

Also Read  ರಾಜ್ಯದಲ್ಲಿ ನಾಲ್ವರಿಗೆ ಕೊರೋನ ದೃಢ

error: Content is protected !!
Scroll to Top