(ನ್ಯೂಸ್ ಕಡಬ) newskadaba.com ಕಾರ್ಕಳ, ನ. 21. ನಕ್ಸಲ್ ನಿಗ್ರಹ ದಳ ನಡೆಸಿದ ಎನ್ಕೌಂಟರ್ ಗೆ ಸೋಮವಾರದಂದು ಬಲಿಯಾದ ಮಾವೋವಾದಿ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರವನ್ನು ಆತನ ಹುಟ್ಟೂರು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕೂಡ್ಲುವಿನ ಮೈರೋಳಿ ಎಂಬಲ್ಲಿ ನೆರವೇರಿಸಲಾಯಿತು.
ವಿಕ್ರಮ್ ಗೌಡನ ಸಹೋದರ ಸುರೇಶ್ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ಸಹೋದರಿ ಸುಗುಣ ಹಾಗೂ ಸ್ಥಳೀಯರು, ಸ್ವಬಂಧುಗಳು ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಪಾಲ್ಗೊಂಡರು. ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಎ ಎನ್ ಎಫ್ ಪಡೆ ಹಾಗೂ ಹೆಬ್ರಿಯ ಪೋಲೀಸ್ ಠಾಣೆಯ ಠಾಣಾಧಿಕಾರಿಗಳಾದ ಮಹಂತೇಶ್ ಜಾಬಗೌಡ , ಮಹೇಶ್ ಟಿ ಎಂ ಹಾಗೂ ಅಜೆಕಾರು ಠಾಣೆಯ ಠಾಣಾಧಿಕಾರಿ ರವಿ ಬಿ. ಕೆ ಉಸ್ತುವಾರಿ ವಹಿಸಿದ್ದರು.