ಹೆಜ್ಜೇನು ದಾಳಿಗೆ ಇಬ್ಬರ ಸ್ಥಿತಿ ಗಂಭೀರ

(ನ್ಯೂಸ್ ಕಡಬ) newskadaba.com ಕೋಟ, . 21. ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟತಟ್ಟು ಪರಿಸರದಲ್ಲಿ ಹೆಜ್ಜೇನು ದಾಳಿಗೆ ಇಬ್ಬರ ಸ್ಥಿತಿ ಗಂಭೀರ ಘಟನೆ ನಡೆದಿದೆ.

ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷೆ ಸರಸ್ವತಿ ಹಾಗೂ ಪುತ್ರಿ ಸೌಜನ್ಯ ಇವರು ದಾಳಿಗೆ ತುತ್ತಾದವರು. ಗುರುವಾರ ಮುಂಜಾನೆ ಇಬ್ಬರು ತನ್ನ ಮೂಲ ನಾಗಬನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಹೆಜ್ಜೇನು ಪೂರ್ಣಪ್ರಮಾಣದಲ್ಲಿ ದಾಳಿಗೈದಿದ್ದು ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರ ಸ್ಥಳೀಯರು ಧಾವಿಸಿ ಜೀವದ ಹಂಗು ತೋರೆದು ಜೇನು ದಾಳಿಗೊಳಗಾದವರ ಮೈಮೇಲೆ ಗೋಣಿಚೀಲ ಹಾಗೂ ಬಟ್ಟೆ ಹಾಕಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

Also Read  ಉಜಿರೆ ಬಾಲಕನ ಅಪಹರಣ ಪ್ರಕರಣ ➤ ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ , ಸುಳ್ಳು ಮಾಹಿತಿ ಹರಡದಂತೆ ಬಿಜಾಯ್ ಮನವಿ

 

error: Content is protected !!
Scroll to Top