ಅಂಬ್ಯುಲೆನ್ಸ್ ಗೆ ದಾರಿ ಬಿಡದೆ ರಸ್ತೆಯಲ್ಲಿ ಸತಾಯಿಸಿದ್ದ ಕಾರು ಚಾಲಕ: 2.5 ಲಕ್ಷ ದಂಡ ವಿಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕೇರಳ, . 20.  ರೋಗಿ ಇರುವ ಅಂಬ್ಯುಲೆನ್ಸ್ ಗೆ ದಾರಿ ಕೊಡದೆ ರಸ್ತೆಯಲ್ಲಿ ಸತಾಯಿಸಿದ್ದ ಕಾರು ಚಾಲಕನಿಗೆ ಪೊಲೀಸರು ಶಾಕ್ ನೀಡಿದ್ದು, ಬರೋಬ್ಬರಿ 2.5 ಲಕ್ಷ ದಂಡ ವಿಧಿಸಿದ್ದಲ್ಲದೆ ಆತನ ಚಾಲನಾ ಪರವಾನಗಿಯನ್ನೇ ರದ್ದು ಮಾಡಿದ್ದಾರೆ.

ಸಾಗುತ್ತಿದ್ದ ಕಾರು ಚಾಲಕ ಬೇಕೆಂದೇ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಉದ್ಧಟನ ಪ್ರದರ್ಶನ ಮಾಡಿದ್ದಾನೆ. ಪದೇ ಪದೇ ಆ್ಯಂಬುಲೆನ್ಸ್ ಗೆ ಅಡ್ಡ ಬಂದು ರೋಗಿಯ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ. ಇದರಿಂದ ಆಕ್ರೋಶಗೊಂಡ ಆ್ಯಂಬುಲೆನ್ಸ್ ಚಾಲಕ ಕಾರು ಮಾಲೀಕನ ದುರ್ವರ್ತನೆಯನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಚಾಲಕ ಎಷ್ಟೇ ಹಾರ್ನ್ ಮಾಡಿದರೂ ದಾರಿ ಬಿಟ್ಟು ಕೊಡದ ಕಾರು ಮಾಲೀಕ ರಸ್ತೆಯಲ್ಲಿ ಬೇಕೆಂದೇ ಅಡ್ಡ ಬಂದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಚಾರ ತಿಳಿಯುತ್ತವೇ ಕೇರಳ ಟ್ರಾಫಿಕ್ ಪೊಲೀಸರು ವಿಡಿಯೋ ಮೂಲಕ ಕಾರಿನ ನಂಬರ್ ಮತ್ತು ಅದರ ಮಾಲೀಕನನ್ನು ಪತ್ತೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Also Read  ವಳಕಡಮದಲ್ಲಿ ಅಕ್ರಮ ಮದ್ಯಮಾರಾಟ ► ಅಂಗಡಿ ಮಾಲಿಕನ ವಿರುದ್ಧ ಪ್ರಕರಣ ದಾಖಲು

 

 

error: Content is protected !!
Scroll to Top