ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ದಾಂಪತ್ಯ ಜೀವನ ಅಂತ್ಯ

(ನ್ಯೂಸ್ ಕಡಬ) newskadaba.com ಮುಂಬೈ, . 20.  ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ಎ.ಆರ್‌.ರೆಹಮಾನ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ರೆಹಮಾನ್‌ ಅವರು ತಮ ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ನೀಡಿರುವುದರಿಂದ ಅವರು 29 ವರ್ಷಗಳ ದಾಂಪತ್ಯ ಜೀವನ ಕೊನೆಗೊಂಡಿದೆ.

ರೆಹಮಾನ್‌ ಅವರು ಖ್ಯಾತ ಸಂಗೀತ ಸಂಯೋಜಕರು. ಮೊದಲು ಹಿಂದೂ ಆಗಿದ್ದ ಅವರು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡುದ್ದರು ಹೀಗಾಗಿ ಅವರು ಮುಸ್ಲಿಂ ಹುಡುಗಿಯನ್ನೇ ಮದುವೆ ಆಗಿದ್ದರು. ಇಬ್ಬರೂ ಇನ್ನೇನು ಮೂರು ದಶಕಗಳ ದಾಂಪತ್ಯ ಸಂಭ್ರಮವನ್ನು ಆಚರಿಸಬೇಕಿತ್ತು. ಆದರೆ, ಅದಕ್ಕೂ ಮೊದಲೇ ಇಬ್ಬರೂ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಈ ವಿಚಾರವನ್ನು ಸೈರಾ ಬಾನು ಅವರು ಖಚಿತಪಡಿಸಿದ್ದರು. ಈಗ ರೆಹಮಾನ್‌ ಕೂಡ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ.

Also Read  ಚಿತ್ರೀಕರಣದ ವೇಳೆ ಗಾಯ ➤ ಮಲಯಾಳಂ ನಟ ಪೃಥ್ವಿರಾಜ್ ಗೆ ಇಂದು ಶಸ್ತ್ರಕ್ರಿಯೆ

 

 

error: Content is protected !!
Scroll to Top