ಕೆಎಂಎಫ್ ಸಂಸ್ಥೆಯ ನಂದಿನಿ ಬ್ರ್ಯಾಂಡ್ ಮಾರುಕಟ್ಟೆ ವಿಸ್ತರಿಸಲು ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, . 20.  ರಾಜ್ಯದ ಹೆಮ್ಮೆಯ ಕರ್ನಾಟಕ ಹಾಲು ಒಕ್ಕೂಟದ ( ಕೆಎಂಎಫ್ ) ಉತ್ಪನ್ನ ನಂದಿನಿ ಬ್ಯ್ರಾಂಡ್ ಮಾರುಕಟ್ಟೆಯನ್ನು ರಾಷ್ಟ್ರ ರಾಜಧಾನಿಗೂ ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೊರಟಿದ್ದಾರೆ.

ನಂದಿನಿ ಹಾಲು ಮತ್ತು ಮೊಸರು ಪ್ರಾಡಕ್ಟ್ ಅನ್ನು ದೆಹಲಿಗೂ ವಿಸ್ತರಿಸಲಾಗುತ್ತಿದೆ. ಈ ಸಂಬಂಧ, ಕಾರ್ಯಕ್ರಮವನ್ನು ದೆಹಲಿಯಲ್ಲಿ ಆಯೋಜಿಸಲಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಉದ್ಘಾಟಿಸಲಿದ್ದಾರೆ ಎಂದು ಕೆಎಂಎಫ್ ಸಂಸ್ಥೆಯ ಎಂಡಿ ಎಂ.ಕೆ.ಜಗದೀಶ್ ಹೇಳಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದ ಮುಂಬೈ, ನಾಗಪುರ, ಪುಣೆ ಮತ್ತು ಸೋಲಾಪುರ, ಗೋವಾ, ಹೈದರಾಬಾದ್, ಚೆನ್ನೈ ಮತ್ತು ಕೇರಳ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಈಗ, ದೆಹಲಿಗೆ ಪ್ರವೇಶಿಸುವ ಮೂಲಕ, ಉತ್ತರ ಭಾರತದ ಮಾರುಕಟ್ಟೆಯನ್ನು ಮುಟ್ಟುವ ಗುರಿಯನ್ನು ನಂದಿನಿ ಹೊಂದಿದೆ.

Also Read  ರಾಜ್ಯಕ್ಕೆ ಮೇ 4 ರಂದು ಮೋದಿ, ಯೋಗಿ ಆದಿತ್ಯನಾಥ್ ಎಂಟ್ರಿ..!

 

error: Content is protected !!
Scroll to Top