ನ.23ರಂದು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಗೆ ಮತದಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, . 20. ರಾಜ್ಯ ಚುನಾವಣಾ ಆಯೋಗ ಘೋಷಿಸಿರುವ ವೇಳಾಪಟ್ಟಿಯಂತೆ ವಿವಿಧ ಕಾರಣಗಳಿಂದ ತೆರವಾಗಿದ್ದ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 43 ವಾರ್ಡ್‌ಗಳ ಸದಸ್ಯ ಸ್ಥಾನಗಳಿಗೆ ನವೆಂಬರ್‌ 23ರಂದು ಉಪ ಚುನಾವಣೆಯ ಮತದಾನ ನಡೆಯಲಿದೆ.

ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನ.26ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.ಬೆಂಗಳೂರಿನ ಹೆಬ್ಬಗೋಡಿ, ಚಂದಾಪುರ, ಚಿತ್ರದುರ್ಗ, ಚಳ್ಳಕೆರೆ, ಅರಸೀಕರೆ, ನಿಪ್ಪಾಣಿ, ಇಳಕಲ್‌, ಶಹಾಬಾದ್‌, ರಾಯಚೂರು, ಸಿಂಧನೂರು, ಕೊಪ್ಪಳ ನಗರಸಭೆಗಳಲ್ಲಿ ತೆರವಾಗಿದ್ದ ವಾರ್ಡ್‌ಗಳ ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದೆ.

Also Read  ➤ ಬಂಟ್ವಾಳ 81ರ ವೃದ್ಧನನ್ನು ಅಂಗನವಾಡಿಗೆ ಕಳುಹಿಸಿದ ಹೈಕೋರ್ಟ್

 

error: Content is protected !!
Scroll to Top