ರಫೆಲ್‌ ನಡಾಲ್‌ ಸೋಲಿನೊಂದಿಗೆ ಟೆನಿಸ್‌ ​ವೃತ್ತೀಜಿವನಕ್ಕೆ ವಿದಾಯ

(ನ್ಯೂಸ್ ಕಡಬ) newskadaba.com ಮ್ಯಾಡ್ರಿಡ್, . 20. ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರಫೆಲ್‌ ನಡಾಲ್‌ ಇಂದು ಅಧಿಕೃತವಾಗಿ 20 ವರ್ಷಗಳ ಟೆನಿಸ್​ ವೃತ್ತೀಜಿವನಕ್ಕೆ ವಿದಾಯ ಹೇಳಿದರು. ಸ್ಪೇನ್ ನ ಖ್ಯಾತ ಟೆನಿಸ್ ಆಟಗಾರ, ಆವೆ ಅಂಗಣದ ರಾಜ ಎಂದೇ ಕರೆಸಿಕೊಂಡಿರುವ ರಫೇಲ್ ನಡಾಲ್ 14 ಫ್ರೆಂಚ್ ಓಪನ್ ಕಿರೀಟ ಸೇರಿದಂತೆ 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದ ಸಾಧಕನಾಗಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗ್ಗೆ ನಡೆದಿದ್ದ ಡೇವಿಸ್‌ ಕಪ್‌ ಟೂರ್ನಿಯ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಸಿಂಗಲ್ಸ್‌ ವಿಭಾಗದಲ್ಲಿ ಬೋಟಿಕ್ ವ್ಯಾನ್ ಡಿ ಜಿಡ್‌ಸ್ಚುಲ್ಪ್ ವಿರುದ್ಧ ಕಣಕ್ಕಿಳಿದ್ದ ನಡಾಲ್‌ 4-6, 4-6 ಅಂತರದಿಂದ ಸೋಲು ನಿರಾಸೆ ಅನುಭವಿಸಿದರು. ಸೋಲಿನೊಂದಿಗೆ ಅವರ ವೃತ್ತಿಪರ ಟೆನಿಸ್‌ ಅಂತ್ಯಕಂಡಿತು.

Also Read  ಟ್ವೆಂಟಿ- 20 ವಿಶ್ವಕಪ್ ಗಾಗಿ ಟೀಂ 'ಬಿಲಿಯನ್ ಚಿಯರ್ಸ್ ಜೆರ್ಸಿ' ನೂತನ ಸಮವಸ್ತ್ರ ಅನಾವರಣ

 

error: Content is protected !!
Scroll to Top