ಮದುವೆ ಆಮಂತ್ರಣದ ರೀತಿಯಲ್ಲಿ ಹೊಸ “ಸೈಬರ್ ಸ್ಕ್ಯಾಮ್” ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ, . 20. ಮದುವೇ ಸೀಸನ್ ಶುರುವಾಗಿದೆ. ಬಹುತೇಕರು ಡಿಜಿಟಲ್ ಆಮಂತ್ರಣ ಪತ್ರಿಕೆ ಮಾಡಿಸಿ ವ್ಯಾಟ್ಸಾಪ್ ಮೂಲಕ ಹಂಚುತ್ತಾರೆ. ಬಳಿಕ ಕರೆ ಮಾಡಿ ಮದುವೆಗೆ ಆಮಂತ್ರಣ ಮಾಡುವ ಪದ್ದತಿಯೇ ಈಗ ಹೆಚ್ಚು. ಆದರೆ ಇದೇ ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸಂದರ್ಭವನ್ನು ಸೈಬರ್ ಕ್ರೈಮ್ ಕಿರಾತಕರು ಬಹಿಮಾಚಲ ಪ್ರದೇಶದ ಸೈಬರ್ ಪೊಲೀಸರು ಇದೀಗ ಹೊಸ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರಿಸಿದ್ದಾರೆ.

ಪ್ರತಿಯೊಬ್ಬರು ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರವಾಗಿರಬೇಕು. ಒಂದು ಸಣ್ಣ ತಪ್ಪಿನಿಂದ ಅತೀ ದೊಡ್ಡ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ ಎಂದು ಹಿಮಾಚಲ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.ಡಿಜಿಟಲ್ ಮೂಲಕ ವಂಚನೆ ಪ್ರತಿ ದಿನ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಸೈಬರ್ ಕ್ರೈಂ ಪೊಲೀಸರು ಅದಷ್ಟೇ ಬಿಗಿ ಹಿಡಿತ ಸಾಧಿಸಿದರೂ ಹೊಸ ವಿಧಾನ, ಹೊಸ ರೂಪದಲ್ಲಿ ವಂಚನೆ ನಡೆಯುತ್ತಲೇ ಇದೆ. ಇದೀಗ ಪತ್ತೆಯಾಗಿರುವ ಡಿಜಿಟಲ್ ವೆಡ್ಡಿಂಗ್ ಕಾರ್ಡ್ ಸ್ಕ್ಯಾಮ್ ನಿಮಗೆ ಅಚ್ಚರಿಯಾಗುವುದು ಖಚಿತ ನಿಮಗೆ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದರೆ ಡೌನ್ಲೋಡ್ ಮಾಡುವ ಮುನ್ನ ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಬಗ್ಗೆ ತಿಳಿದುಕೊಳ್ಳಿ.

Also Read  ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ➤ ನಾಲ್ವರ ದುರ್ಮರಣ

ಏನಿದು ಡಿಜಿಟಲ್ ವೆಡ್ಡಿಂಗ್ ಕಾರ್ಡ್ ಸೈಬರ್ ಸ್ಕ್ಯಾಮ್?
ನಿಮ್ಮ ವ್ಯಾಟ್ಸಾಪ್ ನಂಬರ್‌ಗೆ ಅನಾಮಿಕರು, ಅಥವಾ ನಿಮಗೆ ಪರಿಚಯ ಇಲ್ಲದವರೂ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುತ್ತಾರೆ. ಒಂದು ಡೌನ್ಲೋಡ್ ಫೈಲ್ ಆಮಂತ್ರಣ ಪತ್ರಿಕೆ. ಮೇಲ್ನೋಟಕ್ಕೆ ಎಲ್ಲರೂ ಕಳುಹಿಸುವ ಆಮಂತ್ರಣ ಪತ್ರಿಕೆ. ಈ ಆಮಂತ್ರಣ ಪತ್ರಿಕೆಯಲ್ಲಿ ವರ ಹಾಗೂ ವಧುವಿನ ಹೆಸರು, ಮದುವೆ ದಿನಾಂಕ, ಮುಹೂರ್ತ, ಸ್ಥಳ ಸೇರಿದಂತೆ ಎಲ್ಲಾ ಮಾಹಿತಿಯೂ ಇರಲಿದೆ. ಆದರೆ ಈ ಮಾಹಿತಿ, ಈ ಮದುವೆ ನಕಲಿ. ಈ ಡೌನ್ಲೋಡ್ ಫೈಲ್ ಕಳುಹಿಸುವ ಜೊತೆಗೆ ಟೆಕ್ಸ್ಟ್ ಮೆಸೇಜ್ ಕೂಡ ಕಳುಹಿಸಿದ್ದಾರೆ. ದಯವಿಟ್ಟು ಮದುವೆ ಬಂದು ಹರಸಿ, ಸಮಯದ ಅಭಾವದಿಂದ ವ್ಯಾಟ್ಸಾಪ್ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿದ್ದೇನೆ, ಅನ್ಯತಾ ಭಾವಿಸದೆ ದಯವಿಟ್ಟು ಮದುವೆಗೆ ಬನ್ನಿ ಎಂದು ಬರೆಯುತ್ತಾರೆ.

ಅನಾಮಿಕ ಅಥವಾ ನಿಮ್ಮ ಫೋನ್‌ನಲ್ಲಿ ಸೇವ್ ಇಲ್ಲದ ನಂಬರ್‌ನಿಂದ ಈ ರೀತಿಯ ಟೆಕ್ಸ್ಟ್ ಮೆಸೇಜ್ ಜೊತೆ ಡಿಜಿಟಲ್ ಕಾರ್ಡ್ ಬಂದಾಗ? ಸಹಜವಾಗಿ ಯಾರೋ ಕುಟುಂಬಸ್ಥರು, ಆಪ್ತರು, ಗೆಳೆಯರು ಇರಬಹುದು. ಆಮಂತ್ರಣ ಪತ್ರಿಕೆ ನೋಡಿದಾಗ ಯಾರು ಅನ್ನೋದು ತಿಳಿಯಲಿದೆ ಎಂದುಕೊಂಡು ಡೌನ್ಲೋಡ್ ಮಾಡಿದರೆ ಅಲ್ಲೀಗೆ ಕತೆ ಮುಗೀತು. ಕಾರಣ ಈ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡುತ್ತಿದ್ದಂತೆ ಮಾಲ್‌ವೇರ್ ವೈರಸ್ ನಿಮ್ಮ ಫೋನ್ ಸೇರಿಕೊಳ್ಳಲಿದೆ. ಇದರಿಂದ ನಿಮ್ಮ ಫೋನ್‌ನಿಂದ ರಹಸ್ಯವಾಗಿ ಸೈಬರ್ ಕ್ರೈಂ ಕಿರಾತಕರು ಮಾಹಿತಿ ಕದಿಯುತ್ತಾರೆ. ಪ್ರಮುಖವಾಗಿ ಬ್ಯಾಂಕ್ ಖಾತೆ, ಗೂಗಲ್ ಪೇ, ಫೋನ್ ಪೇ ಸೇರಿದಂತೆ ಖಾತೆಗಳ ಮಾಹಿತಿ ಕದ್ದು ಹಣ ಗುಳುಂ ಮಾಡುತ್ತಾರೆ. ನೀವು ಮದುವೆ ಆಮಂತ್ರಣ ಡೌನ್ಲೋಡ್ ಮಾಡಿ ಓದಿ ಮುಗಿಸುವಷ್ಟರಲ್ಲಿ ನಿಮ್ಮ ಖಾತೆ ಕಾಲಿಯಾಗಲಿದೆ.

Also Read  ?? Breaking News ದ.ಕ. ಜಿಲ್ಲೆಯಲ್ಲಿಂದು ಕೊರೋನಾ 'ಆರ್ಭಟ'..!! ➤ ಸೌದಿಯಿಂದ ಬಂದ 30 ಮಂದಿಯಲ್ಲಿ ಸೋಂಕು...!?

error: Content is protected !!
Scroll to Top