ಪದವಿನಂಗಡಿ: ಸರಣಿ ಅಪಘಾತ; ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, . 20. ಮಂಗಳೂರಿನ ಪದವಿನಂಗಡಿಯಲ್ಲಿ ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಮದ್ಯಾಹ್ನ ಸಂಭವಿಸಿದೆ. ಜಯಶೀಲ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಜಯಶೀಲರವರು ರಸ್ತೆಬದಿ ನಿಂತಿದ್ದ ವೇಳೆ ಕಾರು ಬಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಕಾರು ಏಕಾಏಕೀ ಬಂದು ಮುಂದೆ ನಿಂತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು, ಆ ಕಾರು ಮತ್ತೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸರಣಿ ಅಪಘಾತವೂ ಸಂಭವಿಸಿದೆ. ಪರಿಣಾಮ ಪಾದಚಾರಿ ಮಹಿಳೆಯ ಮೇಲೆ ಕಾರು ಎಗರಿ ಈ ಅಪಘಾತ ಸಂಭವಿಸಿದೆ. ಚಾಲಕನ ಬೇಜವಬ್ದಾರಿ ಚಾಲನೆ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

Also Read  ಶಕ್ತಿ ಬ್ಲ್ಯಾಕ್ ಸೊಲ್ಜಾರ್ ಕಾಂಪೊಸ್ಟಿಂಗ್ ಘಟಕದ ಉದ್ಘಾಟನೆ

error: Content is protected !!
Scroll to Top