ಕೆನರಾ ಇಂಜಿನಿಯರಿಂಗ್ ಕಾಲೇಜು ನೂತನ ಇನ್ಕ್ಯುಬೇಶನ್ ಸೆಂಟರ್ ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ಒಪ್ಪಂದ

(ನ್ಯೂಸ್ ಕಡಬ) newskadaba.com ಬಂಟ್ವಾಳ, . 20. ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ನೂತನ ಇನ್ಕ್ಯುಬೇಶನ್ ಸೆಂಟರ್ ಹಾಗೂ ಸ್ಟಾರ್ಟ್ ಅಪ್ ಇಕೋಸಿಸ್ಟಮ್ ವೃದ್ಧಿಗಾಗಿ ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಕೆನರಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನಾಚರಣೆಯ ಸುದಿನ ಅವರ ಉದ್ಯಮಶೀಲತೆಯ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗಾಗಿ ಮುನ್ನಡೆಸುವ ಸಂಕಲ್ಪದೊಂದಿಗೆ ನ.19ರಂದು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೆನರಾ ಸಿಬಿಎಸ್ಸಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಜರುಗಿದ ಈ ಸಮಾರಂಭದಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ಎಂ.ರಂಗನಾಥ ಭಟ್, ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಕೆನರಾ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ನಿರ್ದೇಶಕ ವಿಶ್ವಾಸ್ ಉಚ್ಚಿಲ ಶಿಶಿರ್, ಸಿಎಫ್ ಒ ಪ್ರೇಕ್ಷಾ ತೇಜ್, ಕಾಲೇಜಿನ ಬೋಧಕರು ಮತ್ತು ಆಡಳಿತ ಪ್ರಮುಖರು ಉಪಸ್ಥಿತರಿದ್ದರು.

Also Read  ಉಡುಪಿ: ಮಾಜಿ ಶಾಸಕ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

 

 

error: Content is protected !!
Scroll to Top