ಇಟಲಿ ಪ್ರಧಾನಿ ಮೆಲೋನಿಯವರನ್ನು ಭೇಟಿಯಾದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ಬ್ರೆಜಿಲ್, . 14. ಇಟಲಿ ಪ್ರಧಾನಿ ಮೆಲೋನಿಯವರನ್ನು ಬ್ರೆಜಿಲ್​ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ಈ ವೇಳೆ ಬ್ರೆಜಿಲ್, ಸಿಂಗಾಪುರ, ಬ್ರಿಟನ್, ಇಟಲಿ, ಫ್ರಾನ್ಸ್, ಇಂಡೋನೇಷ್ಯಾ ಸೇರಿದಂತೆ ಹಲವು ಜಾಗತಿಕ ನಾಯಕರ ಜತೆ ಮಾತುಕತೆ ನಡೆಸಿದರು.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ರಕ್ಷಣೆ, ಭದ್ರತೆ ಮತ್ತಿತರ ಸಂಬಂಧಗಳ ಬಲವರ್ಧನೆ ಕುರಿತು ಚರ್ಚಿಸಲಾಯಿತು. ಬ್ರೆಜಿಲ್‌ನಲ್ಲಿ ಜಿ20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಂಡೋನೇಷ್ಯಾ ಮತ್ತು ಪೋರ್ಚುಗಲ್‌ನ ನಾಯಕರನ್ನು ಕೂಡ ಭೇಟಿಯಾದರು.

Also Read  ಚಾಮುಂಡೇಶ್ವರಿ ತಾಯಿ ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳಿ

 

error: Content is protected !!
Scroll to Top