ಪಾಕ್ ವಶದಲ್ಲಿದ್ದ 7 ಭಾರತೀಯ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ

(ನ್ಯೂಸ್ ಕಡಬ) newskadaba.com ಗಾಂಧಿನಗರ, . 14. ಭಾರತ – ಪಾಕಿಸ್ತಾನ ಸಮುದ್ರ ಗಡಿಯ ಮಧ್ಯೆ ಪಾಕಿಸ್ತಾನ ಕರಾವಳಿ ಭದ್ರತಾ ಏಜೆನ್ಸಿ ವಶದಲ್ಲಿದ್ದ ಏಳು ಭಾರತೀಯ ಮೀನುಗಾರರನ್ನು ಗುಜರಾತ್ ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.

ನ. 18ರ ಮಧ್ಯಾಹ್ನ 3:30ರ ಸುಮಾರಿಗೆ ಮೀನುಗಾರಿಕೆ ರಹಿತ ಪ್ರದೇಶದಲ್ಲಿ ಭಾರತೀಯ ಮೀನುಗಾರರ ದೋಣಿ ಕಂಡಿದ್ದು, ಬಳಿಕ ಇನ್ನೊಂದು ದೋಣಿ ‘ಕಾಲ್ ಭೈರವ್’ ಅನ್ನು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ತಡೆಹಿಡಿದಿದೆ. ಜೊತೆಗೆ ಆ ಹಡಗಿನಲ್ಲಿ 7 ಮೀನುಗಾರರು ಇರುವುದಾಗಿ ತಿಳಿದುಬಂದಿದೆ. ಕೂಡಲೇ ಕರಾವಳಿ ಕಾವಲು ಪಡೆ ಕಾರ್ಯಾಚರಣೆ ಆರಂಭಿಸಿದ್ದು, ಭಾರತ – ಪಾಕ್ ಸಮುದ್ರ ಗಡಿ ಬಳಿ ತಲುಪಿದ್ದು, ಮೀನುಗಾರರನ್ನು ರಕ್ಷಿಸಿದೆ.

Also Read  ನ.22ರಂದು ದರ್ಶನ್‌ ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ ರೀ ರಿಲೀಸ್‌

 

error: Content is protected !!
Scroll to Top