ಪುಣ್ಚಪ್ಪಾಡಿ: ಸಿಡಿಲಿಗೆ ಬಲಿಯಾದ ಯುವಕ ಮನೆಗೆ ಶಾಸಕರ ಬೇಟಿ

(ನ್ಯೂಸ್ ಕಡಬ) newskadaba.com ,ಸವಣೂರು,ಮಾ.23.  ಕಳೆದ ಸೋಮವಾರ  ಸಿಡಿಲಿಗೆ ಬಲಿಯಾದ ಪುಣ್ಚಪ್ಪಾಡಿ ಗ್ರಾಮದ ನೆಕ್ಕಿ ನಿವಾಸಿ ಧನಂಜಯ ಹಾಗೂ ಗಾಯಗೊಂಡ ಗೀತಾ, ಕುಂಡ ಅವರ ಮನೆಗೆ ಸುಳ್ಯ ಶಾಸಕ ಎಸ್.ಅಂಗಾರ ಅವರು ಮಂಗಳವಾರ ಸಂಜೆ ಬೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿ ವೈಯುಕ್ತಿಕ ನೆಲೆಯಲ್ಲಿ 10,500 ಧನ ಸಹಾಯ ನೀಡಿದರು. ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸರಕಾರದಿಂದ ಸಿಗುವ ಪರಿಹಾರವನ್ನು ಶೀಘ್ರ ಒದಗಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭ ದ.ಕ. ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ತಾ.ಪಂ .ಉಪಾಧ್ಯಕ್ಷೆ ರಾಜೇಶ್ವರಿ ಕೆ, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಗಿರಿಶಂಕರ್ ಸುಲಾಯ, ಸತೀಶ್ ಬಲ್ಯಾಯ, ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ  ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ ಮೊದಲಾದವರಿದ್ದರು.

Also Read  ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು: ಸೀತಾರಾಮ ರೈ ► ಸರಸ್ವತೀ ವಿದ್ಯಾಲಯದಲ್ಲಿ 'ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಗಾರ'

 

 

error: Content is protected !!
Scroll to Top