(ನ್ಯೂಸ್ ಕಡಬ) newskadaba.com ನ. 19. ರಾಜ್ಯ ಸರ್ಕಾರ ಇಂದಿನಿಂದ ‘ಆಪರೇಷನ್ ರೇಷನ್ ಕಾರ್ಡ್’ ಶುರುಮಾಡಿದೆ. ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾಗಿದೆ.
ನೆರೆಯ ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಸುಮಾರು ಶೇಕಡಾ 50ರಷ್ಟು ಜನ ರೇಷನ್ ಕಾರ್ಡ್ ವ್ಯಾಪ್ತಿಗೆ ಸೇರಿದ್ದಾರೆ. ಆದರೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ರೇಷನ್ ಕಾರ್ಡ್ ವ್ಯಾಪ್ತಿಯಲ್ಲಿ ಇದ್ದಾರೆ. ವಾಸ್ತವ ಏನು ಎಂದರೆ ನಿಜಕ್ಕೂ ರಾಜ್ಯದ ಶೇಕಡಾ 80ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಇಲ್ಲ. ತುಂಬಾ ಜನ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಎಚ್ಛೆತ್ತುಕೊಂಡಿರುವ ಸರ್ಕಾರ ಈಗ ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕೆಲಸ ಆರಂಭಿಸಿದೆ.