ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಗೂಡ್ಸ್ ವಾಹನ: ಕಾರ್ಮಿಕ ಮಹಿಳೆಯರ ರಕ್ಷಣೆ

(ನ್ಯೂಸ್ ಕಡಬ) newskadaba.com ರಾಯಚೂರು, . 19. ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕೆನಾಲ್ ಗೆ ಟಾಟಾ ಏಸ್ ಜಾರಿದ ಘಟನೆ ದೇವದುರ್ಗ ತಾಲ್ಲೂಕಿನ ಜಾಡಲದಿನ್ನಿ ಗ್ರಾಮದಲ್ಲಿ ಸೋಮವಾರ ಬೆಳಕಿಗೆ ನಡೆದಿದೆ.

ಜಾಡಲದಿನ್ನಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮದ ಕೂಲಿಕಾರರನ್ನು ಸಾಗಿಸುತ್ತಿದ್ದ ಟಾಟಾ ಏಸ್ ಜಾಡಲದಿನ್ನಿ ಗ್ರಾಮದ ಕೆನಾಲ್ ಬಳಿಯ ಕಚ್ಚಾ ರಸ್ತೆಯಿಂದ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾಲುವೆಗೆ ಬಿದ್ದ ಬಳಿಕ ಚಾಲಕ ಗಾಡಿ ಆಫ್ ಮಾಡಿದ್ದು ನಡು ನೀರಿನಲ್ಲಿ ನಿಂತ ವಾಹನದಲ್ಲಿದ್ದ ಮಹಿಳೆಯರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಹಿಳೆಯರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗೂಡ್ಸ್ ವಾಹನಗಳಲ್ಲಿ ಹತ್ತಿ‌ಬಿಡಿಸಲು ಕೃಷಿ ಕಾರ್ಮಿಕರನ್ನು ದನಕರುಗಳಂತೆ ಸಾಗಿಸುತ್ತಿದ್ದು ಪೊಲೀಸ್ ಇಲಾಖೆ ‌ಮೌನ ವಹಿಸಿದೆ.

Also Read  ಕಡಬ: ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ

 

 

 

error: Content is protected !!
Scroll to Top