ಸಿಡಿಲು ಬಡಿದು ಸಾವು ►ಸವಣೂರು ಗ್ರಾ.ಪಂ.ನಿಂದ ತುರ್ತು ಪರಿಹಾರ



(ನ್ಯೂಸ್ ಕಡಬ) newskadaba.com ಸವಣೂರು, ಮಾ.23:ಪುಣ್ಚಪ್ಪಾಡಿ ನೆಕ್ಕಿ ನಿವಾಸಿ ಧನಂಜಯ ಇವರು  ದಿನಾಂಕ ಮಾರ್ಚ್ 19 ರಂದು ಸಿಡಿಲು ಬಡಿದು ಮೃತರಾಗಿದ್ದ ಕಾರಣ ಅವರ ತಂದೆಯವರಿಗೆ ಸವಣೂರು ಗ್ರಾಮ ಪಂಚಾಯತ್ ವತಿಯಿಂದ ರೂ.5000/- ತುರ್ತು ಪರಿಹಾರವನ್ನು ಇವರ ಮನೆಯಲ್ಲಿ ಹಸ್ತಾಂತರಿಸಲಾಯಿತು.





ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಬಿ.ಕೆ. ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಮೀಳಾ ಜನಾರ್ಧನ,  ತಾಲೂಕು ಉಪಾಧ್ಯಕ್ಷರಾದ ಕು.ರಾಜೇಶ್ವರಿ,  ಗ್ರಾಮ ಪಂಚಾಯತ್ ಸದಸ್ಯರಾದ ಗಿರಿಶಂಕರ್ ಸುಲಾಯ,ವೇದಾವತಿ ಸಂಜಯ, ಸತೀಶ್ ಬಲ್ಯಾಯ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ಮತ್ತು ಊರಿನ ಪ್ರಮುಖರಾದ ಪ್ರಕಾಶ್ ರೈ ಸಾರಕೆರೆ ದೀಲಿಪ್, ಪ್ರಮೋದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು






error: Content is protected !!
Scroll to Top