ಅಡಿಕೆಯಿಂದ ಬಾಯಿಯ ಕ್ಯಾನ್ಸರ್: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ ವರದಿ

(ನ್ಯೂಸ್ ಕಡಬ) newskadaba.com  ನ. 19: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆಯು ಕ್ಯಾನ್ಸರ್‌ಕಾರಕವಾಗಿದ್ದು, ಬಳಕೆ ನಿಯಂತ್ರಿಸಿದರೆ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ವಿಶ್ವದಲ್ಲಿಯೇ ತಡೆಗಟ್ಟಬಹುದು ಎಂದು ವರದಿ ನೀಡಿದೆ. ಅಡಿಕೆಗೆ ಮತ್ತೆ ಕ್ಯಾನ್ಸರ್‌ಕಾರಕ ಪಟ್ಟ ಕಟ್ಟಿರುವುದಕ್ಕೆ ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘ, ಒಕ್ಕೂಟಗಳು ವರದಿಯನ್ನು ಒಪ್ಪುವುದಿಲ್ಲಎಂದು ಖಂಡಿಸುತ್ತಿವೆ.

ದೇಶದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಅಡಿಕೆ ವ್ಯಾಪ್ತಿ ವ್ಯಾಪಕ ಹೆಚ್ಚುತ್ತಿರುವ ಹೊತ್ತಿನಲ್ಲಿಯೇ ಬಂದಿರುವ ವರದಿ ಈಗ ರಾಜ್ಯದಲ್ಲಿ ತಲ್ಲಣ ಉಂಟು ಮಾಡಿದೆ. ಡಬ್ಲ್ಯೂಎಚ್‌ಒ ಅಂಗ ಸಂಸ್ಥೆಯಾದ ಇಂಟರ್‌ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್ ಆ್ಯಂಡ್‌ ಕ್ಯಾನ್ಸರ್‌ (ಐಎಆರ್‌ಸಿ) ಆ.9, 2024 ರಂದು ಈ ವರದಿ ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಜರ್ನಲ್‌ ಒಂದರಲ್ಲಿ ಈ ವರದಿ ಪ್ರಕಟಿಸಲಾಗಿದೆ. ಎಐಆರ್‌ಸಿ ಬಾಯಿ ಕ್ಯಾನ್ಸರ್‌ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆಯಾಗಿದ್ದು ಪ್ರತಿ ಐದು ವರ್ಷಕ್ಕೊಮ್ಮೆ ತನ್ನ ವರದಿಯನ್ನು ಬಿಡುಗಡೆ ಮಾಡುತ್ತದೆ.

Also Read  ಬೆಂಗಳೂರು ಜನತೆ'ಗೆ ಬಿಗ್‌ ಶಾಕ್‌..! ➤ ಬಾಡಿಗೆ ಮನೆಗಳಿಗೆ ಮತ್ತೆ ಬೆಲೆ ಏರಿಕೆ

error: Content is protected !!
Scroll to Top