ಶರವೇಗದಲ್ಲಿದೆ ಭಾರತದ ಪ್ರಗತಿ

(ನ್ಯೂಸ್ ಕಡಬ) newskadaba.com  ನ. 19. ನವದೆಹಲಿ: ಭಾರತವು ಜಿ 7 ಗುಂಪಿನ 19 ದೇಶಗಳ ಪೈಕಿಯಲ್ಲಿ 2024ನೇ ಸಾಲಿನಲ್ಲಿ ಅತಿ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಬ್ರೆಝಿಲ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ‘ಜಿ 20’ ಶೃಂಗಸಭೆಯ ನೇಪಥ್ಯದಲ್ಲಿ ಬಿಡುಗಡೆ ಮಾಡಲಾದ ಅಂಕಿ-ಅಂಶಗಳಲ್ಲಿ ಭಾರತದ ಸಾಧನೆ ಗಮನ ಸೆಳೆದಿದೆ.

”2024ನೇ ಸಾಲಿಗೆ ಭಾರತವು ವಾರ್ಷಿಕ ಶೇ. 7ರಷ್ಟು ಜಿಡಿಪಿ ಪ್ರಗತಿಯೊಂದಿಗೆ ಮುಂಚೂಣಿ ಸ್ಥಾನ ಪಡೆದಿದೆ. ಈ ಸಾಧನೆಯು ಭಾರತದ ಆರ್ಥಿಕತೆಯ ಸದೃಢತೆಯನ್ನು ಒತ್ತಿ ಹೇಳುತ್ತದೆ. ಜಾಗತಿಕ ಸವಾಲುಗಳ ನಡುವೆ ಭಾರತದ ಅಭಿವೃದ್ಧಿ ದಾಪುಗಾಲು ಮತ್ತು ಸ್ಥಿತಿಸ್ಥಾಪಕತ್ವವನ್ನು ಇದು ಸೂಚಿಸುತ್ತದೆ,” ಎಂದು ಸರಕಾರ ಹೇಳಿದೆ.

Also Read  ​ಕೊಟ್ಟ ಮಾತು ಉಳಿಸಿಕೊಂಡ ಕೆಎಲ್ ರಾಹುಲ್

error: Content is protected !!
Scroll to Top