(ನ್ಯೂಸ್ ಕಡಬ) newskadaba.com ನ. 18. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಕಲುಷಿತ ಹೊಗೆಯು ಸೋಮವಾರ ದಟ್ಟವಾಗಿ ಆವರಿಸಿದ್ದು, ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟ ಎಂದರೆ ಎಕ್ಯೂಐ ಸೂಚ್ಯಂಕ 481ಕ್ಕೆ ಕುಸಿದಿದೆ. ಗಾಳಿ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್(GRAP) ಹಂತ IVರ ಅಡಿಯಲ್ಲಿ ಅಡಿಯಲ್ಲಿ ಕಠಿಣವಾದ ಮಾಲಿನ್ಯ ವಿರೋಧಿ ಕ್ರಮಗಳನ್ನು ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್(CAQM) ಆಯೋಗವು ತೆಗೆದುಕೊಂಡಿದೆ.
ದಿಲ್ಲಿಗೆ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್ ಮತ್ತು ಸಿಎನ್ಜಿಯಂತಹ ಶುದ್ಧ ಇಂಧನಗಳನ್ನು ಹೊತ್ತ ಟ್ರಕ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಟ್ರಕ್ ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೆದ್ದಾರಿಗಳು, ರಸ್ತೆಗಳು, ಮೇಲ್ಸೇತುವೆಗಳು, ಪೈಪ್ಲೈನ್, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಯನ್ನು ನಿಷೇಧಿಸಲಾಗಿದೆ. ಇದಲ್ಲದೆ ದಿಲ್ಲಿ ಸರ್ಕಾರ ಮಕ್ಕಳಿಗೆ ಶಾಲೆಗೆ ಹಾಜರಾಗುವ ಬದಲು ಆನ್ ಲೈನ್ ನಲ್ಲಿ ತರಗತಿಗಳನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
