”ಭಾರತ್ ಗ್ಲೋಬಲ್ ಕಲ್ಚರಲ್ ಎಕ್ಸ್ಪೊ” ಲೋಗೋ ಅನಾವರಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 18. ದೇಶ ವಿದೇಶಗಳ ಸಂಸ್ಕೃತಿಯನ್ನು ಪ್ರತಿನಿಧಿಸುವ ’ಭಾರತ್ ಗ್ಲೋಬಲ್ ಕಲ್ಚರಲ್ ಎಕ್ಸ್‌ಪೋ ’ದ ಲೋಗೋವನ್ನು ಸುಪ್ರೀಂ ಕೋರ್ಟ್ ಹಾಗೂ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗಡೆ ಅನಾವರಣ ಮಾಡಿದರು.ಮಿರಾಯ ಇವೆಂಟ್ಸ್ ಪ್ರೈವೇಟ್ ಲಿಮಿಟೆಡ್ ಇವರ ವತಿಯಿಂದ ಹಾಗು ಕರ್ನಾಟಕದ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದೊಂದಿಗೆ ’ಭಾರತ್ ಗ್ಲೋಬಲ್ ಕಲ್ಚರಲ್ ಎಕ್ಸ್ಪೋ ’ ಎನ್ನುವ ಶೀರ್ಷಿಕೆಯನ್ನು ಹೊಂದಿರುವ ವಿನೂತನ ಕಾರ್ಯಕ್ರಮ ೨೦೨೫ರ ಏಪ್ರಿಲ್ ೯ ರಿಂದ ೧೪ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಒಂದೇ ವೇದಿಕೆಯಲ್ಲಿ ಬೇರೆ ಬೇರೆ ದೇಶಗಳ ವಿಭಿನ್ನ ಸಂಸ್ಕೃತಿ ಯನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.

Also Read  ದ.ಕ ಜಿಲ್ಲೆಯಲ್ಲಿ ಹೇರಲಾಗಿದ್ದ ರಾತ್ರಿ ನಿರ್ಬಂಧ ತೆರವು ➤ ಆ. 14ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ- ಡಿಸಿ ಆದೇಶ


ಜಾಗತಿಕ ಮತ್ತು ಭಾರತೀಯ ಸಂಸ್ಕೃತಿಗಳ ಆಚರಣೆ, ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಈ ಕಾರ್ಯಕ್ರಮವು ಪ್ರತಿಬಿಂಬಿಸುತ್ತದೆ. ಪ್ರಪಂಚದ ನಾನಾ ದೇಶಗಳಿಂದ ಹಲವಾರು ಕಲಾವಿದರು ಆಗಮಿಸಿ ತಮ್ಮ ದೇಶದ ಕಲೆ ಮತ್ತು ಸಂಸ್ಕೃತಿಯನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದ್ದಾರೆ.
ಲೋಗೋ ಬಿಡುಗಡೆ ಬಳಿಕ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಭಾರತ ದೇಶ ಮತ್ತು ಇತರ ದೇಶಗಳ ನಡುವೆ ವ್ಯಾಪಾರ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ಒಗ್ಗೂಡಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಎಂದು ಮಾಧ್ಯಮ ಗಳಿಗೆ ತಿಳಿಸಿದರು.

error: Content is protected !!
Scroll to Top