(ನ್ಯೂಸ್ ಕಡಬ) newskadaba.com ಹಾಸನ, ನ. 18. ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೈಜೀರಿಯಾ ಭೇಟಿ ಬಳಿಕ ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ ಗೆ ಆಗಮಿಸಿದ್ದಾರೆ. ರಿಯೊ ಡಿ ಜನೈರೊಗೆ ಭಾರತೀಯ ಕಾಲಮಾನ ಪ್ರಕಾರ ಇಂದು ಬೆಳಗ್ಗೆ ಆಗಮಿಸಿದ ಪ್ರಧಾನಿ ಮೋದಿ ಭರ್ಜರಿ ಸ್ವಾಗತ ದೊರೆತಿದೆ.
ಬ್ರೆಜಿಲ್‌ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಿದೆ. ಜಿಲ್ ನ ವೇದ ವಿದ್ವಾಂಸರು ಪ್ರಧಾನಮಂತ್ರಿ ಮೋದಿಯವರ ಮುಂದೆ ವೇದ ಮಂತ್ರಗಳನ್ನು ಪಠಿಸಿದ್ದು ವಿಶೇಷವಾಗಿತ್ತು. ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿನ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ. ಅನಿವಾಸಿ ಭಾರತೀಯರು ‘ಮೋದಿ ಮೋದಿ’ ಘೋಷಣೆಗಳನ್ನು ಕೂಗುತ್ತಾ ಭಾರತೀಯ ಸಂಸ್ಕೃತಿಯಂತೆ ನೃತ್ಯ ಮೂಲಕ ಸ್ವಾಗತಿಸಿದರು.
Also Read ಪಂಜ ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ➤ ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿ ಸಹಿತ ಪಿಕಪ್ ವಶಕ್ಕೆ