ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಲಾರಿ

(ನ್ಯೂಸ್ ಕಡಬ) newskadaba.com ಹಾಸನ, ನ. 18. ನಗರದ 80 ಅಡಿ ರಸ್ತೆಯಲ್ಲಿ ಪ್ಲಾಸ್ಟಿಕ್‌ ತುಂಬಿದ್ದ ಲಾರಿ ಆಕಸ್ಮಿಕ ಬೆಂಕಿಗೆ ಸಂಪೂರ್ಣ ಆಹುತಿಯಾಗಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ಮೂಡಿಗೆರೆ ಮೂಲದ ಲಾರಿ ಪ್ಲಾಸ್ಟಿಕ್‌ ತುಂಬಿಕೊಂಡು ಹಾಸನದಿಂದ ಬೆಂಗಳೂರಿಗೆ ತೆರಳುತ್ತಿತ್ತು. ವಾಹನ ಚಾಲಕ ನಗರದವರೇ ಆಗಿದ್ದು, ರಾತ್ರಿ 7.30ರ ಸಮಯದಲ್ಲಿ ರಸ್ತೆ ಪಕ್ಕದ ಸೇತುವೆ ಬಳಿ ಲಾರಿ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಸ್ಥಳೀಯರು ಕಸಕ್ಕೆ ಹಾಕಿದ್ದ ಬೆಂಕಿ ಲಾರಿಗೆ ವ್ಯಾಪಿಸಿ ಹೊತ್ತಿ ಉರಿಯಿತು ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು. ಈ ಕುರಿತು ಪೆನ್ಷನ್‌ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಿಜೆಪಿ ಶಾಸಕಾಂಗ ಪಕ್ಷದ ನಾಯಕ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ

 

 

error: Content is protected !!
Scroll to Top