ಮೂವರು ಯುವತಿಯರ ಮೃತ್ಯು ಪ್ರಕರಣ: ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ, ನ. 18. ಉಚ್ಚಿಲದ ವಾಝ್ಕೋ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರೆಸಾರ್ಟ್ ಮಾಲೀಕ ಮನೋಹರ್ ಹಾಗೂ ಮೆನೇಜರ್ ಭರತ್ ಎಂದು ಗುರುತಿಸಲಾಗಿದೆ. ಅವರ ನಿರ್ಲಕ್ಷ್ಯ ಧೋರಣೆಯಿಂದ ಈ ಅನಾಹುತ ಸಂಭವಿಸಿದ್ದು, ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈಜು ಕೊಳದಲ್ಲಿ ಮೃತಪಟ್ಟ ಕೀರ್ತನ, ನಿಶಿತಾ ಹಾಗೂ ಪಾರ್ವತಿ ಅವರ ಪೋಷಕರು ರವಿವಾರ ತಡರಾತ್ರಿ ಆಗಮಿಸಿದ್ದು, ಮೂವರ ಮೃತದೇಹ ವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮೂವರ ಮೃತದೇಹವನ್ನು ತಡರಾತ್ರಿ ಮೈಸೂರು ಗೆ ಕೊಂಡೊಯ್ಯಲಾಗಿದೆ.

Also Read  ಶಾಲೆಯ ಬಳಿ ಬಾರ್ ತೆರೆಯದಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

 

error: Content is protected !!
Scroll to Top