ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಕೇರಳ ಹೈಕೋರ್ಟ್ ಮಹತ್ವದ ನಿರ್ಧಾರ

(ನ್ಯೂಸ್ ಕಡಬ) newskadaba.com . 16. ಕೇರಳ: ಸಮಾರಂಭ ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕೇರಳದ ಹೈಕೋರ್ಟ್ ಸೂಚನೆ ನೀಡಿದ್ದು, ಹಬ್ಬಗಳಲ್ಲಿ ಆನೆಗಳನ್ನು ಬಳಸುವುದನ್ನುಯಾವುದೇ ಧರ್ಮವು ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಿದೆ. ಉತ್ಸವಗಳಲ್ಲಿ ಮೆರವಣಿಗೆ ನಡೆಸುವ ಆನೆಗಳ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್, ಆನೆಗಳ ಮೆರವಣಿಗೆಗೆ ಸಮಯದ ಮಿತಿ ಸೇರಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪ್ರಾಣಿಗಳ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಸಂಬಂಧಿಸಿದ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ಅರ್ಜಿ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಪಿ ಗೋಪಿನಾಥ್ ಅವರ ವಿಭಾಗೀಯ ಪೀಠವು, ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಸೆರೆಯಲ್ಲಿದ್ದ ಶೇ.33ರಷ್ಟು ಆನೆಗಳು ಸಾವನ್ನಪ್ಪಿವೆ ಎಂದು ಕಳವಳವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಅನುರಿಸಬೇಕೆಂದು ನ್ಯಾಯಾಲಯ ಹೇಳಿದೆ.
ಉತ್ಸವಗಳಲ್ಲಿ ಆನೆಗಳ ಬಳಕೆ ಬಗ್ಗೆ ನ್ಯಾಯಾಲಯ ಮಾರ್ಗ ಸೂಚಿ ಹೊರಡಿಸಿದೆ. ಮಾರ್ಗಸೂಚಿಗಳ ಪ್ರಕಾರ, ಆನೆಗಳಿಗೆ ಎರಡು ಪ್ರದರ್ಶನಗಳ ವನ್ಯಜೀವಿ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರ ಪ್ರಕನಡುವೆ ಮೂರು ದಿನಗಳಿಗಿಂತ ಕಡಿಮೆಯಿಲ್ಲದ ವಿಶ್ರಾಂತಿಯನ್ನು ನೀಡಬೇಕು. ಆನೆಗಳನ್ನು ಕಟ್ಟಿಹಾಕುವ ಸ್ಥಳ ಸ್ವಚ್ಛವಾಗಿರಬೇಕು ಮತ್ತು ಆ ಸ್ಥಳವು ವಿಶಾಲವಾಗಿರಬೇಕು. ಆನೆಗಳ ಪ್ರದರ್ಶನ ಅಥವಾ ಮೆರವಣಿಗೆ ವೇಳೆ ಸಾಕಷ್ಟು ಸ್ಥಳಾವಕಾಶ ಇರಬೇಕು.ಲಭ್ಯವಿರುವ ಸ್ಥಳದ ಆಧಾರದ ಮೇಲೆ ಎಷ್ಟು ಆನೆಗಳನ್ನು ಮೆರವಣಿಗೆ ನಡೆಸಬಹದು ಎಂದು ನಿರ್ಧರಿಸಬೇಕು. ಆನೆಗಳನ್ನು ಹಗಲಿನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆಗೆ ಮಾಡಬಾರದು.

Also Read  ಕನ್ನಡಿಗರ ಆಕ್ರೋಶಕ್ಕೆ ಕಾರಣರಾದ ಫೋನ್ ಪೇ ಸಿಇಒ..!     ಟ್ವೀಟ್ ಮೂಲಕ ಕ್ಷಮೆಯಾಚನೆ.!

error: Content is protected !!
Scroll to Top