ಮಂಗಳೂರು: ಇಂದು SJM ದ. ಕ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ

(ನ್ಯೂಸ್ ಕಡಬ) newskadaba.com . 16.  ಚಿಣ್ಣರ ಸಂಭ್ರಮ, ಪ್ರತಿಭಾ ಸಂಗಮʼ ಎಂಬ ಸಂದೇಶದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಾ ಸಂಗಮದ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವಿಭಾಗದ ಪ್ರತಿಭಾ ಸಂಗಮವು ಶನಿವಾರ (ಇಂದು) ಸಂಜೆ ಹಯಾತುಲ್ ಇಸ್ಲಾಂ ಮದ್ರಸ ಬಜಾಲ್ ನಂತೂರುನಲ್ಲಿ ನಲ್ಲಿ ಆರಂಭಗೊಂಡು ರವಿವಾರ ಸಂಜೆಯ ವರೆಗೆ ನಡೆಯಲಿದೆ.

ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಇದರ ಅಧ್ಯಕ್ಷ, ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯರೂ ಆದ ಅಬ್ದುಲ್ ರವೂಫ್ ಇವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು SJM ಜಿಲ್ಲಾ ವೆಸ್ಟ್ ವಿಭಾಗದ ಅಧ್ಯಕ್ಷರಾದ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ 2 ದಿವಸಗಳ ವಿವಿಧ ಸ್ಪರ್ಧೆಗಳು ನಡೆಯಲಿದೆ . 12 ರೇoಜ್ ಗಳಿಂದ ಸುಮಾರು 107 ಮದ್ರಸಗಳ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು. 3 ವಿಭಾಗವಾಗಿ 6 ವೇದಿಕೆಗಳಲ್ಲಿ 70 ಸ್ಪರ್ಧೆಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ SJM ರಾಜ್ಯ ನಾಯಕರು, SMA ಜಿಲ್ಲಾ ನಾಯಕರು ಇನ್ನಿತರ ನಾಯಕರು ಭಾಗವಹಿಸಲಿದ್ದಾರೆ ಎಂದು SJM ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವಿಭಾಗದ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Also Read  ನ. 14ರ ನಾಳೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮಲ್ಪೆ ಬೀಚ್ನಲ್ಲಿ ವಿಂಚ್ ಪ್ಯಾರಾಸೈಲಿಂಗ್ ಬೋಟ್ ಸಮಾರಂಭ

 

 

error: Content is protected !!
Scroll to Top